ವರದಿ ಎಡತೊರೆ ಮಹೇಶ್
ಎಚ್.ಡಿ.ಕೋಟೆ: ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಕಲ್ಲು ಕಂಬಗಳನ್ನು ಧ್ವಂಸ ಮಾಡಿ ಬೆಳೆ ನಷ್ಟ ಮಾಡಿದ ವ್ಯಕ್ತಿಗಳ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರು ಉಪವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ತಾಲ್ಲೂಕಿನ ಎನ್.ಬೆಳ್ತೂರು ಗ್ರಾಮದ ಸರ್ವೇ ನಂಬರ್ 58 ರಲ್ಲಿ 10 ಎಕರೆ ಜಮೀನು ವಿಶ್ವನಾಥ ಸಿದ್ದರಾಮ ರೆಡ್ಡಿ ಎಂಬುವವರಿಗೆ ಸೇರಿದ್ದು, ಈ ಜಮೀನಿಗೆ ಆ.9 ರಂದು ಆರು ಗಂಟೆ ಸಮಯದಲ್ಲಿ ಮಾರನಹಾಡಿಯ ಮಣಿ, ಮಧು, ಮರಿಲಿಂಗಯ್ಯ, ಗಣೇಶ, ಮಹಾದೇಶ, ಮಳಲಿ ಗ್ರಾಮದ ಶಾಂತಕುಮಾರ ಹಾಗೂ ಇತರರು ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಜಮೀನಿನ ತಂತಿ ಬೇಲಿ ಕಿತ್ತು ಹಾಕಿ, ಕಂಬಗಳನ್ನು ತುಂಡರಿಸಿ ಸುಮಾರು ಇಪ್ಪತೈದು ಮೂವತ್ತು ಲಕ್ಷ ರೂ ನಷ್ಟ ಉಂಟು ಮಾಡಿದ್ದಾರೆ ಎಂದು ಜಮೀನು ಉಸ್ತುವಾರಿ ನೋಡಿಕೊಳ್ಳುತ್ತಿರುವ ವೇಣು ಎಂಬುವವರು ಅಂತರಸಂತೆ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಪಡೆದ ಸಬ್ ಇನ್ಸ್ಪೆಕ್ಟರ್ ಚಂದ್ರ ಹಾಸನ್ ಅವರು ಪರಿಶೀಲನೆ ನಡೆಸಿ ಜಮೀನಿನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ ನಂತರ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದಾರೆ.
ಹಿನ್ನೆಲೆ: ಎನ್.ಬೆಳ್ತೂರು ಸರ್ವೇ ನಂಬರ್ 58 ರಲ್ಲಿ ಆದಿವಾಸಿ ಜನಾಂಗದ ಹೊನ್ನಯ್ಯನ ಕುಟುಂಬದವರಿಗೆ 0.30 ಕುಂಟೆ ಜಮೀನು ಇದ್ದು ಈ ಜಮೀನಿನಲ್ಲಿ ಹೊನ್ನಯ್ಯನ ಕುಟುಂಬ ವ್ಯವಸಾಯ ಮಾಡಿಕೊಂಡಿರುತ್ತಾರೆ.
ಹೊನ್ನಯ್ಯನ ಜಮೀನು ಹೊಂದಿಕೊಂಡಂತೆ ಪಕ್ಕದಲ್ಲಿ ಎನ್.ಬೆಳ್ತೂರು ಗ್ರಾಮದ ಗುರುಸ್ವಾಮಿ ಕುಟುಂಬದ ಹತ್ತು ಎಕರೆ ಜಮೀನು ಇದ್ದು ಈ ಜಮೀನನ್ನು ವಿಶ್ವನಾಥ ಸಿದ್ದರಾಮ ರೆಡ್ಡಿ ಎಂಬುವವರು ಖರೀದಿ ಮಾಡಿ ದುರಸ್ತಿಗೆ ಅರ್ಜಿ ಹಾಕಿದ ಸಂದರ್ಭದಲ್ಲಿ ಆದಿವಾಸಿ ಕೂಸಯ್ಯ ಮತ್ತು ಗಿರೀಶ್ ಎಂಬುವವರು ತಕರಾರು ಸಲ್ಲಿಸುತ್ತಾರೆ.
ನಂತರದ ದಿನಗಳಲ್ಲಿ ನನ್ನ ತಂದೆ ಹೊನ್ನಯ್ಯ ಅವರ ಹೆಸರಿನಲ್ಲಿ ಕೇವಲ ಮೂವತ್ತು ಕುಂಟೆ ಜಮೀನು ಮಾತ್ರ ಇದೆ ಎಂಬ ಸತ್ಯ ತಿಳಿದ ಮೇಲೆ ಕೂಸಯ್ಯ ಮತ್ತು ಗಿರೀಶ್ ತಾವು ತಹಶಿಲ್ದಾರ್ ಕಚೇರಿಗೆ ನೀಡಿದ ತಕರಾರು ಅರ್ಜಿ ವಾಪಸು ಪಡೆಯುತ್ತಾರೆ. ತಾವು ಅಂದುಕೊಂಡಂತ್ತೆ ನಡೆಯಲಿಲ್ಲಾ ಎಂದು ಕೂಸಯ್ಯ ಮತ್ತು ಗಿರೀಶ್ ಅವರಿಗೆ ಮಣಿ ಮತ್ತು ಶಾಂತಕುಮಾರ್ ಕಿರುಕುಳ ಕೊಡಲು ಪ್ರಾರಂಭಿಸುತ್ತಾರೆ.
ಇದಕ್ಕೂ ಬಗ್ಗದಿದ್ದಾಗ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಕಲ್ಲು ಕಂಬ ಹೊಡೆದುಹಾಕಿ, ಬೆಳೆ ನಾಶ ಪಡಿಸಿ ಅಪಾರ ಹಾನಿ ನಷ್ಟ ಉಂಟುಮಾಡಿದ್ದಾರೆ ಎಂದು ವೇಣು ಅಂತರಸಂತೆ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ
ಎನ್.ಬೆಳ್ತೂರು ಗ್ರಾಮದ ಹತ್ತು ಎಕರೆ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಜಮೀನಿನಲ್ಲಿ ಕಲ್ಲು ಕಂಬ ಹೊಡೆದು ಹಾಕಿ, ಜಮೀನಿನಲ್ಲಿ ಬೆಳೆ ನಷ್ಟ ಮಾಡಿದ ವಿಚಾರವಾಗಿ ಸುಮಾರು 25 ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಿ ತನಿಖೆ ನಡೆಸಲಾಗುತ್ತಿದೆ.
-ಚಂದ್ರಹಾಸನ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಂತರಸಂತೆ ಪೋಲೀಸ್ ಠಾಣೆ.