Monday, September 1, 2025
Google search engine

Homeಅಪರಾಧಕೆ.ಆರ್. ನಗರದಲ್ಲಿ ಅಕ್ರಮ ಗಾಂಜಾ ಗಿಡ ಬೆಳೆದು ಪತ್ತೆ: ಪ್ರಕರಣ ದಾಖಲು

ಕೆ.ಆರ್. ನಗರದಲ್ಲಿ ಅಕ್ರಮ ಗಾಂಜಾ ಗಿಡ ಬೆಳೆದು ಪತ್ತೆ: ಪ್ರಕರಣ ದಾಖಲು

ವರದಿ: ವಿನಯ್ ದೊಡ್ಡಕೊಪ್ಪಲು

ಕೆ ಆರ್ ನಗರ : ಟೌನ್ ನಲ್ಲಿ ಗಸ್ತು ನಿರತರಾಗಿದ್ದಾಗ ಮಾಹಿತಿದಾರನು ಕರೆ ಮಾಡಿ ಕೆ ಆರ್ ನಗರ ತಾಲ್ಲೂಕು,ಮುಸ್ಲೀಂ ಬ್ಲಾಕ್ ಹೊಂದಿಕೊಂಡಂತಿರುವ ಸರ್ವೇ ನಂಬರ್ 54, ಮದುವನಹಳ್ಳಿ, ಹೆಬ್ಬಾಳು ಹೋಬಳಿ ಇಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿರುವುದರ ಬಗ್ಗೆ ಬಂದ ಮಾಹಿತಿ ಮೇರೆಗೆ NDPS ಕಾಯ್ದೆ 1985ರ ಕಲಂ 42ರ ರೀತ್ಯಾ ಶೋಧನಾ ವಾರೆಂಟ್ ತಯಾರಿಸಿ ಪಂಚರ ಸಮಕ್ಷಮ ಶೋಧನೆ ಮಾಡಲಾಗಿ 5.2 ಅಡಿ ಎತ್ತರ, 470 ಗ್ರಾಂ ತೂಕವಿರುವ ಹೂ ಮತ್ತು ತೆನೆಯನ್ನು ಹೊಂದಿರುವ ಒಂದು ಗಾಂಜಾ ಗಿಡ ಬೆಳೆದಿರುವುದು ಕಂಡು ಬಂದಿದ್ದರಿಂದ NDPS ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ. ದಾಳಿ ಸಮಯದಲ್ಲಿ ಕೆ ಆರ್ ನಗರ ವಲಯದ ಅಬಕಾರಿ ನಿರೀಕ್ಷಕ ಲೋಕೇಶ್ ವೈ ಎಸ್ ಮತ್ತು ಸಿಬ್ಬಂದಿಗಳಾದ ಶಿವಕುಮಾರ್ ಕೆ ಪಿ, ಶಿವಪ್ಪ ಭಾನುಸಿ, ಗೋಪಾಲಕೃಷ್ಣ ಹಾಜರಿದ್ದರು.

RELATED ARTICLES
- Advertisment -
Google search engine

Most Popular