ಗುಂಡ್ಲುಪೇಟೆ: ಕೇರಳ ರಾಜ್ಯಕ್ಕೆ ಅಕ್ರಮವಾಗಿ ಯುರಿಯಾ ರಸಗೊಬ್ಬರವನ್ನ ಲಾರಿ ಮೂಲಕ ಸಾಗಿಸುತಿದ್ದ ವೇಳೆ ದಾಳಿ ನಡೆಸಿ ಲಾರಿ ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಗುಂಡ್ಲುಪೇಟೆಯ ಕೃಷಿ ಇಲಾಖೆ ಅಧಿಕಾರಿ ಕಿರಣ್ ಕೇರಳ. ರಾಜ್ಯಕ್ಕೆ ಅಕ್ರಮವಾಗಿ ಯುರಿಯಾ ರಸಗೊಬ್ಬರ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ರಾಜ್ಯದ ಗಡಿಭಾಗದಲ್ಲಿ ಯುರಿಯಾ ತುಂಬಿದ ಲಾರಿಯನ್ನ ವಶಕ್ಕೆ ಪಡೆದಿದ್ದಾರೆ.
ಗುಂಡ್ಲುಪೇಟೆ ಪೋಲೀಸರ ಜೊತೆ ಜಂಟಿ ಕಾರ್ಯಾಚರಣೆ ನಡೆಸಿ ಈ ಲಾರಿಯನ್ನ ವಶಕ್ಕೆ ಪಡೆದಿದ್ದು ಕೃಷಿ ಇಲಾಖೆಯ ಅಧಿಕಾರಿ ಕಿರಣ್ ದೂರಿನ ಅನ್ವಯ ಗುಂಡ್ಲುಪೇಟೆ ಪೋಲೀಸ್ ಠಾಣೆಯಲ್ಲಿ ಮುಂದಿನ ಕ್ರಮಕ್ಕಾಗಿ ಲಾರಿಯನ್ನ ವಶಕ್ಕೆ ನೀಡಲಾಗಿದೆ ಎಂದು ಕೃಷಿ ಅಧಿಕಾರಿ ಕಿರಣ್ ಮಾಹಿತಿ ನೀಡಿದ್ದಾರೆ.