ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪ್ಲಾಸ್ಕ್ ನಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದ ಅಕ್ರಮ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಸೌದಿ ಅರೇಬಿಯಾದ ಜೇದಾ ಏರ್ಪೋಟ್ನಿಂದ ಆಗಿಸಿದ್ದ ಪ್ರಯಾಣಿಕ, ಚಿನ್ನವನ್ನು ಪೇಸ್ಟ್ ಮಾಡಿ ಪ್ಲಾಸ್ಕ್ನ ಒಳಗಡೆ ಇಟ್ಟುಕೊಂಡು ಅಕ್ರಮವಾಗಿ ಸಾಗಿಸಲು ಯತ್ನಿಸಿದ್ದಾನೆ. ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಚಿನ್ನವಿರುವುದು ಪತ್ತೆಯಾಗಿದೆ.
ಪ್ರಯಾಣಿಕನಿಂದ ಅಧಿಕಾರಿಗಳು 7 ಲಕ್ಷ 52 ಸಾವಿರ ರೂ. ಮೌಲ್ಯದ 122 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ. ಬಳಿಕ ಅಧಿಕಾರಿಗಳು ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದಾರೆ.