ಹಾವೇರಿ: ಅಕ್ಕನ ಜೊತೆಗೆ ಅಕ್ರಮ ಸಂಬಂಧ ಹೊಂದಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಂತ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ತಮ್ಮ ಬರ್ಬರವಾಗಿ ಹತ್ಯೆಗೈದ ಘಟನೆ ರಾಣೆಬೆನ್ನೂರಿನಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾಕೋಳ ಗ್ರಾಮದ ದಿಲೀಪ್ ಹಿತ್ತಲಮನಿ(47) ಎಂಬಾತನೇ ಕೊಲೆಯಾದಂತ ವ್ಯಕ್ತಿಯಾಗಿದ್ದಾರೆ. ಈತನನ್ನು ರಾಜಯ್ಯ ಎಂಬಾತ ಹತ್ಯೆಗೈದಿದ್ದಾರೆ.
ದಿಲೀಪ್ ಹಿತ್ತಲಮನಿ ಎಂಬಾತ ರಾಜಯ್ಯ ಎಂಬುವರ ಅಕ್ಕನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದನು. ಈ ಬಗ್ಗೆ ಎಷ್ಟೇ ಬುದ್ದಿ ಹೇಳಿದ್ದರು ಬಿಟ್ಟಿರಲಿಲ್ಲ. ಇಂದು ಅಕ್ಕನ ಜೊತೆಗೆಯಲ್ಲಿ ಇದ್ದಾಗಲೇ ರೆಡ್ ಹ್ಯಾಂಡ್ ಆಗಿ ದಿಲೀಪ್ ಸಿಕ್ಕಿಬಿದ್ದಿದ್ದನು.
ಈ ಹಿನ್ನಲೆಯಲ್ಲಿ ರೊಚ್ಚಿಗೆದ್ದಂತ ರಾಜಯ್ಯ ತನ್ನ ಅಕ್ಕನ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಂತ ವ್ಯಕ್ತಿಯಾಗಿದ್ದಂತ ದಿಲೀಪ್ ಹಿತ್ತಲಮನಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಈ ಸಂಬಂಧ ರಾಣೆಬೆನ್ನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ರಾಜಯ್ಯನನ್ನು ಬಂಧಿಸಿದ್ದಾರೆ.