Wednesday, May 21, 2025
Google search engine

Homeಅಪರಾಧಮೈಸೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ : ೮ ಲಕ್ಷ ರೂ.ಮದ್ಯ ವಶ

ಮೈಸೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ : ೮ ಲಕ್ಷ ರೂ.ಮದ್ಯ ವಶ

ಮೈಸೂರು : ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಹಾಗೂ ಬಿಯರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎನ್. ಆರ್. ಮೊಹಲ್ಲದ ಮೇಸ್ಕೋ ಸ್ಕೂಲ್ ರಸ್ತೆಯಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ಕಾರ್ಯಚರಣೆ ವೇಳೆ ಈ ಅಕ್ರಮ ಪತ್ತೆಯಾಗಿದೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಸರಬರಾಜಿನ ಮೇಲೆ ಅಧಿಕಾರಿಗಳು ನಿಗಾ ಇರಿಸಿದ್ದು, ತಮಗೆ ಬಂದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಬಕಾರಿ ಜಂಟಿ ಆಯುಕ್ತ ಎಫ್.ಎಸ್. ಛಲವಾದಿ, ಹಾಗೂ ಅಬಕಾರಿ ಉಪ ಆಯುಕ್ತ ಎಸ್. ನಾಗರಾಜಪ್ಪ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ಎ.ಎ.ಮುಜಾವರ ಹಾಗೂ ಸಿಬ್ಬಂದಿಗಳು ನಗರದ ಮೇಸ್ಕೋ ಸ್ಕೂಲ್ ರಸ್ತೆಯಲ್ಲಿ ದಾಳಿ ಮಾಡಿ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಿವಿಧ ಬ್ರಾಂಡಿನ ೮೮.೫೬೦ ಲೀಟರ್ ಮದ್ಯ ಹಾಗೂ ೪೬.೯೨೦ ಲೀಟರ್ ಬಿಯರ್ ಸೇರಿದಂತೆ ಒಟ್ಟು ೮ ಲಕ್ಷ ರೂಪಾಯಿ ಮೌಲ್ಯದ ಮಾಲನ್ನು ವಶ ಪಡಿಸಿಕೊಂಡರು.

ಮದ್ಯ ಸಾಗಾಟಮಾಡುತ್ತಿದ್ದ ನಾಗರಾಜು ಹಾಗೂ ಆತನಿಗೆ ಮದ್ಯ ಪೂರೈಸಿದ ಶಂಕರ್ ಮತ್ತು ವಾಹನ ಮಾಲೀಕರ ವಿರುದ್ದ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಚೇರಿಯ ಹಿರಿಯ ವಾಹನ ಚಾಲಕ ಮಂಜು, ಬಿ.ಎಸ್. ಗುರುಮಲ್ಲೇಶ್, ಹಿರಿಯ ಪೇದೆ ಎನ್.ಅಝಮ್, ಪ್ರತಾಪ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular