ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕೆ.ಆರ್.ನಗರ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಅಭಿವೃದ್ದಿಗೆ ಸರ್ಕಾರದಿಂದ ದೊರೆಯುವ ಎಲ್ಲಾ
ಸವಲತ್ತುಗಳನ್ನು ಕೊಡಿಸಿ ರೈತರ ಬೆನ್ನೆಲುಬಾಗಿ ನಿಲ್ಲುತ್ತೇನೆ, ಆಡಳಿತ ಮಂಡಳಿಯವರು ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಅನುಷ್ಠಾನ ಮಾಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಬ್ಯಾಂಕಿನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ರೈತರ ಜೀವನಾಡಿಯಾಗಿರುವ ಸಹಕಾರ
ಬ್ಯಾಂಕುಗಳು ಮತ್ತು ಸಂಘಗಳನ್ನು ಉಳಿಸಿ ಬೆಳೆಸುವ ಮೂಲಕ ಅನ್ನದಾತನಿಗೆ ಸಹಾಯ ಹಸ್ತಚಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ
ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸಾಲ ಪಡೆಯುವ ರೈತರು ಸಕಾಲದಲ್ಲಿ ಮರುಪಾವತಿ ಮಾಡಿ ಹೊಸ ರೈತ ಸದಸ್ಯರು ಸಾಲ ಪಡೆದುಕೊಳ್ಳಲು ಸಹಕಾರ ನೀಡಬೇಕು ಎಂದು ತಿಳಿಸಿದ ಶಾಸಕರು ದೇಶದ ಉದ್ದಾರವಾಗಬೇಕಾದರೆ ರೈತರು ಸಂತಸದಿoದ ಇರಬೇಕು ಹಾಗಾಗಿ ನಾವೆಲ್ಲರೂ ಅವರ ಜತೆಗೆ ನಿಲ್ಲಬೇಕೆಂದು ತಿಳಿಸಿದರು.
ಬ್ಯಾಂಕಿಗೆ ಹೆಚ್ಚು ಹಣ ಕೊಡಿಸಿ ರೈತರ ಅಗತ್ಯತೆಗೆ ತಕ್ಕಂತೆ ಸಾಲ ನೀಡಲು ಸಹಕಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದು ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಇತರರ ಜತೆ ಸಿದ್ದರಾಮಯ್ಯನವರನ್ನು ಮತ್ತೊಮ್ಮೆ ಭೇಟಿ ಮಾಡಿ ಬೇಡಿಕೆ ಸಲ್ಲಿಸುವುದಾಗಿ ಭರವಸೆ ನೀಡಿದರು.
ಆಡಳಿತ ಮಂಡಳಿಯವರು ಸಹ ರೈತರಿಗೆ ಸಾಲ ನೀಡುವಾಗ ಯಾವುದೇ ತಾರಮತ್ಯ ಮಾಡದೆ ಅರ್ಹರನ್ನು ಗುರುತಿಸಿ ಮನೆ ಬಾಗಿಲಿಗೆ ಸರ್ಕಾರದ ಸವಲತ್ತು ತಲುಪಿಸಿ ಇತರರಿಗೆ ಮಾರ್ಗದರ್ಶಕರಾಗಬೇಕು ಎಂದು ಸಲಹೆ ನೀಡಿದ ಶಾಸಕ ಡಿ.ರವಿಶಂಕರ್ ಯಾವುದೇ ಸಮಸ್ಯೆಗಳಿದ್ದರು ನನ್ನ ಗಮನಕ್ಕೆ ತಂದರೆ ಅವುಗಳನ್ನು ಪರಿಹರಿಸಲು ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲಾ ಕಾಸ್ಕಾರ್ಡ್ ಬ್ಯಾಂಕ್ ನಿರ್ದೇಶಕ ತಿಮ್ಮರಾಯಿಗೌಡ, ಬ್ಯಾಂಕಿನ ಅಧ್ಯಕ್ಷ ಬಿ.ಎಂ.ಮಲ್ಲಿಕಾರ್ಜುನ ಮಾತನಾಡಿದರು. ಇದಕ್ಕೂ ಮೊದಲು ಕಾಸ್ಕಾರ್ಡ್ ಬ್ಯಾಂಕಿನ ಅಧ್ಯಕ್ಷರು ಆದ ತಿಪಟೂರು ಶಾಸಕ ಕೆ.ಎನ್.ಷಡಕ್ಷರಿ ಬ್ಯಾಂಕಿಗೆ ಭೇಟಿ ನೀಡಿ ಶುಭ ಹಾರೈಸಿದರು. ಪುರಸಭೆ ಸದಸ್ಯ ಕೋಳಿಪ್ರಕಾಶ್, ತಾ.ಪಂ. ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್,
ನಗರಾಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯದ್‌ಜಾಬೀರ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಹೆಚ್.ಹೆಚ್.ನಾಗೇಂದ್ರ, ಬ್ಯಾಂಕಿನ ಉಪಾಧ್ಯಕ್ಷೆ ಪುಷ್ಪರೇವಣ್ಣ, ನಿರ್ದೇಶಕರಾದ ಎಂ.ಎಸ್.ಹರಿಚಿದoಬರ,
ಎನ್.ಸಿ.ಪ್ರಸಾದ್, ಬಿ.ಎಸ್.ಚಂದ್ರಹಾಸ, ಕಲಾವತಿ, ಆರ್.ಸಿ.ರಮೇಶ್, ಪ್ರೇಮಕುಳ್ಳಬೋರೇಗೌಡ,
ಬಿ.ಸಿದ್ದೇಗೌಡ, ಕೆ.ಟಿ.ಚಂದ್ರೇಗೌಡ, ಸಿ.ಎಸ್.ಚಂದ್ರಶೇಖರ್, ಪರಶುರಾಮಯ್ಯ, ರಾಮೇಗೌಡ, ಸಿದ್ದನಾಯಕ, ಪ್ರದೀಪಕುಮಾರ್, ವ್ಯವಸ್ಥಾಪಕ ನವೀನ್‌ಕುಮಾರ್ ಮತ್ತು ಬ್ಯಾಂಕಿನ ಸಿಬ್ಬಂದಿ ಹಾಜರಿದ್ದರು.