ಮದ್ದೂರು: ತಾಲೂಕಿನ ಬೊಮ್ಮನ ದೊಡ್ಡಿ ಗ್ರಾಮದಲ್ಲಿ ಮಂಡ್ಯ ಮನ್ಮುಲ್ ವತಿಯಿಂದ ನೂತನ ಹಾಲಿನ ಸಹಕಾರ ಸಂಘವನ್ನು ಗೋ ಪೂಜೆ ಮಾಡುವ ಮೂಲಕ ಮನ್ಮಲ್ ನಿರ್ದೇಶಕಿ ಕು.ರೂಪ ಉದ್ಘಾಟಿಸಿ ಮಾತನಾಡಿದರು.
ಎಷ್ಟೋ ವರ್ಷಗಳ ನಂತರ ನಿಮ್ಮೂರಿಗೆ ನಿಮ್ಮದೇ ಆದಂತ ಸ್ವಂತ ಡೈರಿ ಬಂದಿದೆ ಗುಣಮಟ್ಟದ ಹಾಲು ಪೂರೈಕೆ ಮಾಡುವುದರ ಜೊತೆಗೆ ಮಂಡ್ಯ ಮನ್ಮಲ್ ಬೆಳೆಸಿ ಜೊತೆಗೆ ನಿಮ್ಮೂರಿನ ಸಹಕಾರ ಸಂಘವು ಕೂಡ ಬೆಳೆಯಲಿ ಇದು ಯಾರ ಒಬ್ಬರ ಸಂಘವನ್ನು ಇದು ಎಲ್ಲರ ಸಂಘ ಎಲ್ಲರೂ ಗುಣಮಟ್ಟದ ಹಾಲನ್ನ ಪೂರೈಕೆ ಮಾಡಿ ಉನ್ನತ ಮಟ್ಟಕ್ಕೆ ಬೆಳೆಯಿರಿ ಎಂದು ತಿಳಿಸಿದರು.

ನಮ್ಮಲ್ಲಿ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಹಸುಗಳ ಆರೋಗ್ಯ ಕಾಪಾಡುವುದರ ಜೊತೆಗೆ ಹಸುಗಳ ವಿಮೆ ಹಾಗೂ ರಿಯಾಯಿತಿ ದರದಲ್ಲಿ ಸಬ್ಸಿಡಿಯಲ್ಲಿ ಸಿಗುವ ಹುಲ್ಲು ಕಟಾವು ಯಂತ್ರ, ಹಸುವಿನ ಮ್ಯಾಟ್, ಪಡೆದುಕೊಂಡು ಸಾವಲಂಬಿಗಳಾಗಿ ನಮ್ಮ ಮನ್ಮುಲ್ ವೈದ್ಯರೇ ನಿಮ್ಮ ಗ್ರಾಮಕ್ಕೆ ಬಂದು ಹಸುಗಳ ಆರೋಗ್ಯವನ್ನು ಪರೀಕ್ಷಿಸುತ್ತಾರೆ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದರು.
ಈ ವೇಳೆ ಸಂಘದ ನೂತನ ಅಧ್ಯಕ್ಷರಾದ ಬಿಎಂ ಕೃಷ್ಣ, ಉಪಾಧ್ಯಕ್ಷ ಶಿವ ಮಾದೇಗೌಡ, ಸದಸ್ಯರಾದ ಬಸವಲಿಂಗ, ಅಜಿತ್ ಕುಮಾರ್, ನವೀನ್, ಸಿದ್ದೇಗೌಡ, ದೇವರಾಜು, ಸುಗುಣ ಕೆಆರ್, ಸ್ವರೂಪ ಯುಸಿ ಹಾಜರಿದ್ದರು.