ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್‌ನಗರ : ರೈತರಿಗೆ ನೀಡುತ್ತಿರುವ ಪ್ರತಿ ಲೀಟರ್ ನ ಪ್ರೋತ್ಸಾಹ ಧನವನ್ನು 5 ರೂಗಳಿಂ 8 ರೂ ಗಳಿಗೆ ಹೆಚ್ಚಿಸ ಬೇಕೆಂದು ರಾಜ್ಯ ಸರ್ಕಾರವನ್ನು ಹಳಿಯೂರು ಬಡಾವಣೆ ಡೈರಿ ಅಧ್ಯಕ್ಷ ಎಚ್ ಆರ್ ಕೃಷ್ಣಮೂರ್ತಿ ಒತ್ತಾಯಿಸಿದರು.
ಸಾಲಿಗ್ರಾಮ ತಾಲೂಕಿನ ಹಳಿಯೂರು ಬಡಾವಣೆ ಹಾಲು ಉತ್ಪಾದಕರ ಸಹಕಾರ ಸಂಘದ ಅವರಣದಲ್ಲಿ ನಡೆದ ಸಂಘದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರೋತ್ಸಾಹ ಧನ ಹೆಚ್ಚಳದಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಲಕ್ಷಾಂತರ ರೈತರಿಗೆ ಪಶು ಆಹಾರ, ಮೇವು ಖರೀದಿಗೆ ಅನಯಕೂಲವಾಗಲಿದ್ದು ಈ ನಿಟ್ಟನಲ್ಲಿ ಪಶುಸಂಗೋಪನೆ ಸಚಿವರು ಗಮನ ಹರಿಸಬೇಕೆಂದ ಅವರು ಮನವಿ ಮಾಡಿದರು.
ರೈತರು ಸಂಘದಿಂದ ಸಿಗುವ ಪಶು ಆಹಾರವನನ್ನು ಬಳಸಿ ಕೊಂಡು ಗುಣ ಮಟ್ಟದ ಹಾಲು ಸರಬರಾಜು ಮಾಡಿದರೇ ಜಿಡ್ಡಿನಾ ಅಂಶ ಹೆಚ್ಚಿನ ಹಾಲಿಗೆ ಉತ್ತಮ ದರ ಸಿಗಲಿದ್ದುಇದರಿಂದ ಸಂಘದ ಅಭಿವೃದ್ದಿಗೆ ಸಹ ನೀಡುವ ಮೂಲಕ ತಮ್ಮ ಆರ್ಥಿಕತೆ ಹೆಚ್ಚಿಸಿ ಕೊಳ್ಳಿ ಎಂದರು.
ಮುಖ್ಯ ಅತಿಥಿಯಾಗಿದ್ದ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹೊಸೂರು.ಎ.ಕುಚೇಲ್ ಮಾತನಾಡಿ ಸಂಘಕ್ಕೆ ಗುಣ ಮಟ್ಟದಲ್ಲಿ ಹೆಚ್ಚಿನ ಹಾಲು ಸರಬರಾಜು ಮಾಡುವ ರೈತರಿಗೆ ಬಹುಮಾನ ವಿತರಿಸಿ ರೈತರು ಹೆಚ್ಚಿನ ಗುಣಮಟ್ಟದ ಹಾಲು ಸರಬರಾಜು ಮಾಡಲು ಉತ್ತೇಜನ ನೀಡಿದಾಗ ಸಂಘ ಅಭಿವೃದ್ಧಿ ಹೊಂದಲಿದ್ದು ಈ ನಿಟ್ಟಿನಲ್ಲಿ ಸಂಘ ಅಡಳಿತ ಮಂಡಳಿ ಶ್ರಮಿಸ ಬೇಕೆಂದರು.
ಸಂಘ ವಾರ್ಷಿಕ ಬಜೆಟ್ ಅನ್ನ ಸಂಘದ ಸಮಲೋಚನ ವಿಸ್ತಾರಣಾಧಿಕಾರಿ ಅಭಿಷೇಕ್ ಚಿಕ್ಕನಾಯಕನಹಳ್ಳಿ ಮಂಡಿಸಿದರು ಇದೇ ಸಂದರ್ಭದಲ್ಲಿ ಮೈಮಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್ ಅವರನ್ನ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹೊಸೂರು ಸಹಕಾರ ಸಂಘದ ಅಧ್ಯಕ್ಷ ಎಚ್.ಎಸ್.ಜಗದೀಶ್, ನಿರ್ದೇಶಕರಾದ ಹಳಿಯೂರು ನವೀನ್, ಎಚ್.ಎನ್.ರಮೇಶ್, ಎಸ್.ಅರ್.ವಿವೇಕ್, ಗ್ಯಾರಂಟಿ ಸಮಿತಿ ಸದಸ್ಯ ಮಹಾಲಿಂಗಣ್ಣ ಮುಖಂಡರಾದಎಚ್.ಅರ್.ರಾಘವೇಂದ್ರ, ಎಚ್.ಅರ್.ಯಶವಂತ್, ದಿನೇಶ್, ಅಜಿತ್, ಆನಂದ್, ಸುಬ್ಬಣ್ಣ, ಗೋವಿಂದೇಗೌಡ, ಉಪಾಧ್ಯಕ್ಷ ಹೆಚ್.ಕೆ.ವಿಕ್ರಮ್ ಗೌಡ, ನಿರ್ದೇಶಕರಾದ ಹೆಚ್.ಬಿ.ಜಯಣ್ಣ, ಎಚ್.ಎಸ್.ಅಜಯ್, ಎಚ್.ಟಿ.ಪ್ರಮೋದ್,ಡಿ.ಜಿ.ಕೃಷ್ಣ,ಲಕ್ಮ್ಷಿನಾಗರಾಜು,ಹೇಮ, ಸುಭದ್ರಮ್ಮ, ಸಂಘದ ಕಾರ್ಯದರ್ಶಿ ಎಚ್.ಪಿ.ರಾಜೇಶ್, ಸಿಬ್ಬಂದಿ ಎಚ್.ಅರ್.ಕೀರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.