ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮೈಸೂರು ಜಿಲ್ಲಾ ಸಹಕಾರ ಬ್ಯಾಂಕಿನಿಂದ ರೈತರಿಗೆ 1400 ಕೋಟಿ ಬೆಳೆ ಸಾಲ ವಿತರಿಸಲಾಗಿದ್ದು 2026-27 ಸಾಲಿನಿಂದ ಈ ಸಾಲದ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ದೊಡ್ಡಸ್ವಾಮೇಗೌಡ ಹೇಳಿದರು.
ಸಾಲಿಗ್ರಾಮ ತಾಲೂಕಿನ ಚಿಬುಕಹಳ್ಳಿ ಕೃಷಿಪತ್ತಿನ ಸಹಕಾರ ಸಂಘದಿಂದ ತಮಗೆ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಇದರ ಜತಗೆ ನೀಡಲಾಗಿರುವ ಎನ್.ಎಪ್.ಎಸ್, 800 ಕೋಟಿ ರೂ ಸಾಲದ ಮೊತ್ತವನ್ನು ಇನ್ನಷ್ಟು ಹೆಚ್ಚಿಸುವುದರ ಜತಗೆ ಹೊಸದಾಗಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವ ರೈತರಿಗೆ ಸಾಲ ಕೊಡಿಸಲು ಕ್ರಮ ಕೈ ಗೊಳ್ಳಲಾಗುತ್ತಿದೆ ರೈತರು ಅತಂಕ ಪಡುವುದು ಬೇಡ ಎಂದರು. ಈವರಿಗೂ ಕೃಷಿ ಪತ್ತಿನ ಸಂಘದಿಂದ ನೀಡಲಾಗಿರುವ ಸಾಲವನ್ನು ಪಡೆದು ಸುಸ್ತಿಯಾಗಿರುವ ರೈತರಿಂದ ವಾಪಸ್ ಕಟ್ಟಿಸಲು ಮಾರ್ಚ್ ಅಂತ್ಯದ ಗುರಿಯನ್ನು ಸಂಘದ ಸಿಇಓ ಗಳಿಗೆ ಸೂಚನೆ ನೀಡಲಾಗಿದ್ದು ಸಾಲ ವಸೂಲಾತಿಯಿಂದ ಸಂಘದ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದರು.
ಎರಡು ಜಿಲ್ಲೆಯಲ್ಲಿ ಕೃಷಿಪತ್ತಿನ ಸಹಕಾರ ಸಂಘಗಳು ನಿವೇಶನ ಹೊಂದಿ ಹೊಸದಾಗಿ ಕಟ್ಟಡ ನಿರ್ಮಿಸಲು ಮುಂದಾದರೇ ಜಿಲ್ಲಾ ಬ್ಯಾಂಕಿನಿಂದ ಅನುಧಾನ ಕೊಡಿಸುವೇ ಎಂದು ತಿಳಿಸಿದ ದೊಡ್ಡಸ್ವಾಮೇಗೌಡ ಚಿಬುಕಹಳ್ಳಿ ಸಂಘದ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದಕ್ಕು ಮೊದಲು ಗ್ರಾಮಕ್ಕೆ ಅಗಮಿಸಿದ ದೊಡ್ಡಸ್ವಾಮೇಗೌಡ ಅವರನ್ನು ಸಂಘದ ಅಧ್ಯಕ್ಷ ಸಿ.ಎಂ.ಶಿವಕುಮಾರ್ ಅವರ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಪಹಳಿಯೂರು ಎಂಸಿಡಿಸಿ ಬ್ಯಾಂಕ್ ಶಾಖೆ ವ್ಯವಸ್ಥಾಪಕ ಪ್ರತಾಪ್ ಆಯರಹಳ್ಳಿ , ಮೇಲ್ವಿಚಾರಕ ದಿನೇಶ್ ಮೂಡಲಕೊಪ್ಪಲು ಸಂಘದ ಅಧ್ಯಕ್ಷ ಸಿ.ಎಂ.ಶಿವಕುಮಾರ್, ಉಪಾಧ್ಯಕ್ಷ ನಂಜೇಗೌಡ, ನಿರ್ದೇಶಕರಾದ ಸಚಿನ್, ಶಿವರಾಜು, ಗಣೇಶ್,ವೆಂಕಟೇಶ್,ಮಂಜುಳಾ,ವೀಣಾ ನಿಂಗರಾಜು, ಮಾಜಿ ಸದಸ್ಯ ಕೆ.ಎನ್.ತಮ್ಮಗೌಡ, ತಾ.ಪಂ.ಮಾಜಿ ಸದಸ್ಯ ಚಿಕ್ಕೇಗೌಡ, ಹೊಸಕೋಟೆ ಗ್ರಾ.ಪಂ.ಅಧ್ಯಕ್ಷ ಮಾದೇಗೌಡ, ಸದಸ್ಯ ಪುನೀತ್, ಡೈರಿ ಅಧ್ಯಕ್ಷ ಬೀರೇಗೌಡ, ದಲಿತ ಮುಖಂಡ ಚಿಬುಕಹಳ್ಳಿ ರೇಖಾಮಂಜುನಾಥ್, ಸಂಘದ ಕಾರ್ಯದರ್ಶಿ ಎಚ್.ಎಸ್.ಕೃಷ್ಣೇಗೌಡ, ಸಿಬ್ಬಂದಿಗಳಾದ ಎಚ್.ಎಸ್.
ನಾಗರಾಜು, ಸಿ.ಎಸ್.ಕುಮಾರ್, ಕುಪ್ಪೆ ಸಂಘದ ಸಿ.ಇ.ಓ ಪುನೀತ್ ಕುಮಾರ್, ಡೈರಿ ನಿರ್ದೇಶಕ ಮೋಹನ್ ಕುಮಾರ್, ಸೋಮಶೇಖರ್, ಆರ್.ಮಹೇಶ್, ಮುಖಂಡ ಸಿ.ಎಂ.ಮಂಜು,ಕೋಗಿಲೂರು ರಾಜು ಇದ್ದರು.



