ಮಂಗಳೂರು (ದಕ್ಷಿಣ ಕನ್ನಡ): ಡಿವೈಎಫ್ ಐ ಬೆಂಗ್ರೆ ವತಿಯಿಂದ ಆಯೋಜಿಸಿದ ಇಂಡಿಪೆಂಡೆನ್ಸ್ ಕಪ್ ಸೀಸನ್ 3 ಫುಟ್ಬಾಲ್ ಪಂದ್ಯಾಕೂಟ ಇಂದು ಮಂಗಳೂರಿನ ಕಸ್ಬಾ ಮೈದಾನದಲ್ಲಿ ನಡೆಯಿತು.
ಉದ್ಘಾಟನೆಯನ್ನು ಕಸ್ಬಾ ಬ್ರದರ್ಸ್ ಮಾಜಿ ನಾಯಕ ಹಿರಿಯ ಆಟಗಾರ ರಿಝ್ವಾನ್ ಬೆಂಗ್ರೆ ನಡೆಸಿಕೊಟ್ಟರು.
ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ಕಸಬಾ ಬೆಂಗ್ರೆ ಗ್ರಾಮದ 8ನೇ ತರಗತಿ ಒಳಗಿನ ವಿದ್ಯಾರ್ಥಿಗಳಿಗೆ ಫುಟ್ಬಾಲ್ ಪಂದ್ಯಾಕೂಟ ಆಯೋಜಿಸಲಾಗಿತ್ತು.

ಈ ಸಂಧರ್ಭದಲ್ಲಿ ಡಿವೈಎಫ್ ಐ ಮುಖಂಡರಾದ ನೌಶಾದ್ ಬೆಂಗ್ರೆ, ಹನೀಫ್ ಬೆಂಗ್ರೆ, ತೈಯೂಬ್ ಬೆಂಗ್ರೆ,ನಾಸೀರ್ ಬಾಸ್,ರಿಝ್ವಾನ್,ಕ್ರೀಡಾ ಕಾರ್ಯದರ್ಶಿ ಫಯಾಝ್,ಇತರ ಸದಸ್ಯರು ಉಪಸ್ಥಿತರಿದ್ದರು.
ಫೈನಲ್ ಪಂದ್ಯ ಹಾಗೂ ವಿಜೇತರಿಗೆ ಬಹುಮಾನ ವಿತರಣೆ ಸಮಾರೋಪ ಕಾರ್ಯಕ್ರಮ ಆಗಸ್ಟ್ 15 ಗುರುವಾರ ಸ್ವಾತಂತ್ರ್ಯ ದಿನ ಸಂಜೆ ಕಸ್ಬಾ ಫುಟ್ಬಾಲ್ ಮೈದಾನದ ಸಮೀಪ ನಡೆಯಲಿದೆ.