ಮೈಸೂರು: ಮೈಸೂರುತಾಲ್ಲೂಕು ಹಳೆಕಾಮನಕೊಪ್ಪಲು ಸರ್ಕಾರಿಕಿರಿಯ ಪ್ರಾಥಮಿಕ ಶಾಲೆಯಲ್ಲಿ ೭೮ನೇ ಸ್ವಾತಂತ್ರ್ಯೋತ್ಸವದಧ್ವಜಾರೋಹಣವನ್ನುಕಾಂಗ್ರೆಸ್ ಮುಖಂಡಕೆ.ಎಸ್. ಕರೀಗೌಡ ನೆರವೇರಿಸಿದರು.
ನಂತರ ಮಾತನಾಡಿದಅವರು ಸಾಂಬಾರ ಪದಾರ್ಥಗಳ ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಬ್ರಿಟಿಷರು ೨೦೦ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತವನ್ನು ಆಳಿದರು. ಭಾರತದ ಸಂಪತ್ತನ್ನೆಲ್ಲಾ ಲೂಟಿ ಮಾಡಿ ವಿದೇಶಕ್ಕೆಕೊಂಡೊಯ್ದರು. ಬ್ರಿಟೀಷರನ್ನು ಭಾರತದಿಂದಓಡಿಸಲು ಮಹಾತ್ಮಾಗಾಂಧಿ ನೇತೃತ್ವದಲ್ಲಿ ಶಾಂತಿಯುತವಾಗಿ ಹೋರಾಟ, ಧರಣಿ, ಸತ್ಯಾಗ್ರಹ ಮಾಡಿದರು. ಸಾವಿರಾರುಜನರ ಬಲಿದಾನತ್ಯಾಗದ ಪರಿಣಾಮವಾಗಿಆಗಸ್ಟ್ ೧೫, ೧೯೪೭ ಭಾರತಕ್ಕೆ ಸ್ವಾತಂತ್ರ್ಯ ಬಂದಿತು.
ಸ್ವಾತಂತ್ರ್ಯಕ್ಕಾಗಿ ಹೋರಾಡಿದಎಲ್ಲಾ ಮಹಾನೀಯರನ್ನುಇಂದು ನಾವು ಸ್ಮರಿಸಬೇಕಾಗಿದೆಎಂದಅವರುಇಂದು ನಾವು ದೇಶದೊಳಗಿರುವ ಆಂತರಿಕ ಶತೃಗಳನ್ನು ಸದೆಬಡಿಯಬೇಕಾಗಿದೆ. ವಿದ್ವಂಸಕಕೃತ್ಯ ನಡೆಸುವವರಿಗೆತಕ್ಕ ಪಾಠಕಲಿಸಿ ಸಮೃದ್ಧ ಭಾರತ ನಿರ್ಮಾಣ ಮಾಡಬೇಕಾಗಿದೆಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ರತ್ನಮ್ಮ ಎಸ್‌ಡಿಎಂಸಿ ಅಧ್ಯಕ್ಷಜಯರಾಂರಮೇಶ್, ನಾಗಣ್ಣ, ನಾಗರಾಜ್, ಸವಿತ, ಭವ್ಯ ಹಾಜರಿದ್ದರು.