Friday, August 15, 2025
Google search engine

Homeಸ್ಥಳೀಯಸ್ವಾತಂತ್ರ್ಯ ದಿನವನ್ನು ಪ್ರತಿ ಮನೆಯಲ್ಲಿ ಹಬ್ಬದಂತೆ ಆಚರಿಸಬೇಕು : ಡಾ. ಬಿ. ದಿನೇಶ್

ಸ್ವಾತಂತ್ರ್ಯ ದಿನವನ್ನು ಪ್ರತಿ ಮನೆಯಲ್ಲಿ ಹಬ್ಬದಂತೆ ಆಚರಿಸಬೇಕು : ಡಾ. ಬಿ. ದಿನೇಶ್

ಮೈಸೂರು: ಸ್ವಾತಂತ್ರ್ಯ ದಿನಾಚರಣೆಯನ್ನು ದೇಶದ ಪ್ರತಿ ಮನೆಮನೆಗಳಲ್ಲಿ ಹಬ್ಬಗಳ ರೀತಿಯಲ್ಲಿ ಸಂಭ್ರಮದಿಂದ ಆಚರಿಸಬೇಕು ಎಂದು ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯರಾದ ಡಾ. ಬಿ. ದಿನೇಶ್ ತಿಳಿಸಿದರು.

ಮೈಸೂರು ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ನಡೆದ ೭೯ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಅವರು ಈ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶದ ಎಲ್ಲಾ ಜನರಿಗೂ ಉತ್ತಮ ಚಿಕಿತ್ಸೆ ನೀಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಸೇರಿ ಪ್ರತಿಜ್ಞೆ ಮಾಡೋಣ ಎಂದ ಅವರು ಇನ್ನೂರು ವರ್ಷಗಳಿಗೂ ಹೆಚ್ಚು ವರ್ಷ ಭಾರತ ದೇಶವನ್ನು ಆಳಿದ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಳ್ಳಲು ಅನೇಕ ಮಹನೀಯರ ತ್ಯಾಗ, ಬಲಿದಾನ, ಹೋರಾಟ ಮಾಡಿದ್ದಾರೆ.

ಜನಸಾಮಾನ್ಯರು, ಪತ್ರಿಕೆಗಳು ಸಹ ಸಹಕಾರ ನೀಡಿದ್ದಾರೆ. ಅಂತಹ ಮಹನೀಯರನ್ನು ಇಂದು ನೆನೆದುಕೊಳ್ಳಬೇಕು. ಭಾರತ ಸ್ವಾತಂತ್ರ್ಯ ಬಂದ ನಂತರದಲ್ಲಿ ಸಂಶೋಧನಾ ಕ್ಷೇತ್ರದಲ್ಲಿ, ವೈಜ್ಞಾನಿಕ ಕ್ಷೇತ್ರದಲ್ಲಿ, ತಂತ್ರಜ್ಞಾನದಲ್ಲಿ, ಆರ್ಥಿಕತೆಯಲ್ಲಿ ತುಂಬಾ ಮುಂದುವರೆದಿದ್ದು, ಚಂದ್ರಲೋಕಕ್ಕೂ ಭಾರತೀಯರು ಹೋಗಿ ಬಂದಿದ್ದಾರೆ. ಭಾರತ ಪ್ರಪಂಚದ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತೀಯ ವೈದ್ಯರು ಪ್ರಪಂಚದಾದ್ಯಂತ ಎಲ್ಲಾ ದೇಶಗಳಲ್ಲಿಯೂ ಸೇವೆ ಮಾಡುತ್ತಿದ್ದಾರೆ. ನಮ್ಮ ಜಯದೇವ ಆಸ್ಪತ್ರೆಗೆ ಬೇರೆ ಬೇರೆ ದೇಶಗಳಿಂದಲೂ ಬಂದು ಚಿಕಿತ್ಸೆ ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ನಮ್ಮ ದೇಶ ನಮ್ಮ ಹೆಮ್ಮೆ ಎಂದ ಅವರು ಎಲ್ಲರಿಗೂ ದೇವರು ಆರೋಗ್ಯ, ಆಯುಷ್ಯಾ ನೀಡಲಿ. ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ಹರ್ಷಾಬಸಪ್ಪ, ಡಾ. ರಾಜೀತ್, ಡಾ. ವೀಣಾನಂಜಪ್ಪ, ಡಾ. ದೇವರಾಜ್, ಡಾ. ಸ್ನೇಹಲ್, ಡಾ. ಮಂಜುನಾಥ್, ಡಾ. ಶಶಿಕಾಂತ್, ಡಾ. ಶ್ರೀನಿಧಿ ಹೆಗ್ಗಡೆ, ಡಾ. ಶ್ರೀಮಂತ್, ಡಾ. ನಿಶ್ಚಿಂತ್, ಡಾ. ಸಚಿನ್‌ರಾವ್, ಡಾ. ಶಶಿಕಾಂತ್, ಡಾ. ಜಯಶೀಲನ್, ಡಾ. ಹರ್ಷ ಎಂ.ಎಂ., ಡಾ. ರಂಜಿತಾ, ನರ್ಸಿಂಗ್ ಅಧೀಕ್ಷಕಿ ಯೋಗಲಕ್ಷ್ಮಿ, ಹರೀಶ್‌ಕುಮಾರ್, ವಾಣಿಮೋಹನ್, ರಮೇಶ್, ಯೋಗಾನಂದ್, ಶಂಕರ್, ಮೋಹಿನಿ, ಚಂಪಕಮಾಲ, ಕಾವೇರಿ ಹರೀಶ್, ಗುರುಮೂರ್ತಿ, ನಾಗರಾಜ್ ಹಾಜರಿದ್ದರು.

RELATED ARTICLES
- Advertisment -
Google search engine

Most Popular