Monday, November 3, 2025
Google search engine

Homeಕ್ರೀಡೆಆಸ್ಟ್ರೇಲಿಯಾದ 8 ವರ್ಷಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಭಾರತ.

ಆಸ್ಟ್ರೇಲಿಯಾದ 8 ವರ್ಷಗಳ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಭಾರತ.

2025ರ ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರಾಡ್ರಿಗಸ್ ಅವರ ಅದ್ಭುತ ಆಟದಿಂದ 339 ರನ್‌ಗಳ ಬೃಹತ್ ಗುರಿ ಬೆನ್ನತ್ತಿ, ಮೂರನೇ ಬಾರಿಗೆ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಪ್ರಶಸ್ತಿಗಾಗಿ ಭಾರತ ಕಾದಾಟ ನಡೆಸಲಿದೆ. ಇದು 8 ವರ್ಷಗಳ ಬಳಿಕ ಆಸ್ಟ್ರೇಲಿಯಾಕ್ಕೆ ಮೊದಲ ಸೋಲು.

8 ವರ್ಷಗಳ ಅಜೇಯ ಓಟಕ್ಕೆ ಬ್ರೇಕ್

ಮೇಲೆ ಹೇಳಿದಂತೆ ಈ ಗೆಲುವಿನೊಂದಿಗೆ ಭಾರತವು ಮಹಿಳಾ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಎಂಟು ವರ್ಷಗಳ ಅಜೇಯ ಓಟಕ್ಕೆ ಬ್ರೇಕ್ ಹಾಕಿದೆ . ಆಸ್ಟ್ರೇಲಿಯಾ ತಂಡವು ಈ ಹಿಂದೆ 2017 ರಲ್ಲಿ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ಸೋತಿತ್ತು. ಅಂದಿನಿಂದ ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ. ಅಚ್ಚರಿಯ ಸಂಗತಿಯೆಂದರೆ 2017 ರಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ್ದು, ಇದೇ ಭಾರತ ಮಹಿಳಾ ತಂಡ.

3ನೇ ಬಾರಿಗೆ ಫೈನಲ್ ಆಡಲಿದೆ ಭಾರತ

ಭಾರತ ತಂಡವು ಮೂರನೇ ಬಾರಿಗೆ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ಗೆ ಅರ್ಹತೆ ಪಡೆದಿದೆ. ಇದಕ್ಕೂ ಮೊದಲು, ಭಾರತ ತಂಡವು 2005 ಮತ್ತು 2017 ರಲ್ಲಿ ರನ್ನರ್-ಅಪ್ ಸ್ಥಾನ ಗಳಿಸಿತ್ತು. ಹಾಗೆಯೇ ಈ ಪಂದ್ಯದಲ್ಲಿ 338 ರನ್ ಗುರಿ ಬೆನ್ನಟ್ಟುವ ಮೂಲಕ ಟೀಂ ಇಂಡಿಯಾ ಏಕದಿನ ವಿಶ್ವಕಪ್ ನಾಕೌಟ್‌ನಲ್ಲಿ (ಪುರುಷ ಅಥವಾ ಮಹಿಳಾ) 300 ಕ್ಕಿಂತ ಹೆಚ್ಚು ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಮೊದಲ ತಂಡ ಎನಿಸಿಕೊಂಡಿದೆ. 2015 ರ ಪುರುಷರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ವಿರುದ್ಧ 298 ರನ್ ಗುರಿ ಬೆನ್ನಟ್ಟಿದ್ದು, ಇದುವರೆಗಿನ ಅತ್ಯಧಿಕ ಚೇಸ್ ಆಗಿತ್ತು.

SPORTS NEWS RAJYADHARMA

RELATED ARTICLES
- Advertisment -
Google search engine

Most Popular