Wednesday, June 11, 2025
Google search engine

HomeUncategorizedರಾಷ್ಟ್ರೀಯಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ: ಇಸ್ರೋ-ನಾಸಾ ಬೆಂಬಲಿತ ಆಕ್ಸಿಯಮ್-4 ಮಿಷನ್ ಉಡಾವಣೆಗೆ ಸಜ್ಜು

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ: ಇಸ್ರೋ-ನಾಸಾ ಬೆಂಬಲಿತ ಆಕ್ಸಿಯಮ್-4 ಮಿಷನ್ ಉಡಾವಣೆಗೆ ಸಜ್ಜು

ನವದೆಹಲಿ: ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್ಎಕ್ಸ್ ಸಂಸ್ಥೆಯ ಫಾಲ್ಕನ್-9 ರಾಕೆಟ್ ಬುಧವಾರ ಉಡಾವಣೆಗೆ ಸಿದ್ಧವಾಗಿದೆ. ಈ ಮೂಲಕ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ತಮ್ಮ ಬಾಹ್ಯಾಕಾಶ ಯಾತ್ರೆ ಆರಂಭಿಸಲಿದ್ದಾರೆ. ಇವರೊಂದಿಗೆ ಅಮೆರಿಕದ ಪೆಗ್ಗಿ ವಿಟ್ಸನ್ (ಕಮಾಂಡರ್), ಹಂಗೇರಿಯ ಟಿಗೋರ್ ಕಾಪು ಮತ್ತು ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ ಇದ್ದಾರೆ.

ಲಕ್ನೋ ಮೂಲದ ಶುಕ್ಲಾ, ಇಸ್ರೋ ಮತ್ತು ನಾಸಾ ಬೆಂಬಲಿತ ಆಕ್ಸಿಯಮ್-4 (ಆಕ್ಸ್-4) ವಾಣಿಜ್ಯ ಬಾಹ್ಯಾಕಾಶ ಮಿಷನಿನಲ್ಲಿ ಪೈಲಟ್ ಪಾತ್ರವಹಿಸಿದ್ದಾರೆ. 1984ರಲ್ಲಿ ರಾಕೇಶ್ ಶರ್ಮಾ ಬಾಹ್ಯಾಕಾಶ ಪ್ರವೇಶಿಸಿದ ನಂತರ ಇದೇ ಮೊದಲ ಬಾರಿಗೆ ಮತ್ತೊಬ್ಬ ಭಾರತೀಯ ಗಗನಯಾತ್ರಿಯೊಬ್ಬರು ಇಂತಹ ಮಹತ್ವದ ಯಾತ್ರೆಗೆ ಹೊರಡುತ್ತಿದ್ದಾರೆ.

ಈ ಮಿಷನ್ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 14 ದಿನಗಳ ಕಾರ್ಯಾಚರಣೆ ನಡೆಸಲಿದ್ದು, ಇದರ ಹೊರತಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್ಸೈನ್ಸ್, ಭೂಮಿ ವೀಕ್ಷಣೆ, ಬಯೋಲಾಜಿಕಲ್ ಅಧ್ಯಯನ ಮತ್ತು ಮೆಟೀರಿಯಲ್ ಸೈನ್ಸ್ ಕುರಿತ ಮಹತ್ವದ ಪ್ರಯೋಗಗಳು ನಡೆಯಲಿವೆ.

ಈ ಮಿಷನ್‌ನಲ್ಲಿ ಶುಕ್ಲಾ ಅವರ ಅನುಭವವನ್ನು 2027ರ ಗಗನಯಾನ ಯೋಜನೆಯ ಸುಧಾರಣೆಗೆ ಬಳಸಲು ಇಸ್ರೋ ಯೋಜಿಸಿದೆ. ಕೇಂದ್ರ ಸರ್ಕಾರ ಈ ಕಾರ್ಯಾಚರಣೆಗೆ ₹550 ಕೋಟಿ ವೆಚ್ಚ ಮಾಡಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಇದನ್ನು “ಸಾರಾಭಾಯ್ ಮತ್ತು ಸತೀಶ್ ಧವನ್‌ಗೆ ಸಲ್ಲುವ ಗೌರವ” ಎಂದು ಹೇಳಿದ್ದಾರೆ.

ಉಡಾವಣೆ ಆರಂಭದಲ್ಲಿ ನಿಗದಿಯಾಗಿದ್ದ ದಿನಾಂಕದಿಂದ ಹವಾಮಾನ ವೈಪರೀತ್ಯದ ಕಾರಣ ನಾಳೆಗೆ ಮುಂದೂಡಲಾಗಿದೆ.

RELATED ARTICLES
- Advertisment -
Google search engine

Most Popular