ಸಿಂಗಾಪುರ: ಅಪ್ರಾಪ್ತ ಬಾಲಕಿಯ ಮೇಲೆ ಎರಡು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಸಿಂಗಾಪುರದಲ್ಲಿ ಭಾರತ ಮೂಲಕ ಪ್ರಜೆಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವಂತಹ ಘಟನೆ ನಡೆದಿದೆ.
ಅಪರಾಧಿಯನ್ನು ರಾಮಲಿಂಗಂ ಸೆಲ್ವಶೇಖರನ್(58) ಎಂದು ಗುರುತಿಸಲಾಗಿದೆ. ಅಪ್ರಾಪ್ತ ಬಾಲಕಿಯ ಮೇಲೆ ಎರಡು ಬಾರಿ ಲೈಂಗಿಕ ದೌರ್ಜನ್ಯ ಎಸಗಿರುವುದು ಸಾಬೀತಾದ ಬಳಿಕ ರಾಮಲಿಂಗಂಗೆ ಸಿಂಗಾಪುರ ಹೈಕೋರ್ಟ್ 14 ವರ್ಷ, ಮೂರು ತಿಂಗಳು ಮತ್ತು ಎರಡು ವಾರಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ರಾಮಲಿಂಗಂ ಎಸಗಿರುವ ಅಪರಾಧಕ್ಕೆ ಛಡಿಯೇಟಿನ ಶಿಕ್ಷೆಯೂ ಇದ್ದು, ಆದರೆ ಆತ 50 ವರ್ಷ ಮೇಲ್ಪಟ್ಟವನಾಗಿರುವುದರಿಂದ 15 ಛಡಿಯೇಟುಗಳ ಬದಲಿಗೆ ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸಲಾಗಿರುವುದಾಗಿ ಸಿಂಗಾಪುರ ದಿ ಸ್ಟ್ರೈಟ್ಸ್ ಟೈಮ್ಸೌವರದಿ ಮಾಡಿದೆ.
ವರದಿಗಳ ಪ್ರಕಾರ 2021ರ ಅಕ್ಟೋಬರ್ 28 ರಂದು ಸಂಜೆ ಸುಮಾರು 4:50 ರಿಂದ 5:5 ರ ನಡುವೆ ಸಿಂಗಾಪುರದ ಪಶ್ಚಿಮ ಕರಾವಳಿಯ ಜುರಾಂಗ್ ವೆಸ್ಟ್‌ನಲ್ಲಿರುವ ದಿನಸಿ ಅಂಗಡಿಯಲ್ಲಿ ರಾಮಲಿಂಗಂ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಆರೋಪಿಯನ್ನು ಬಂಧಿಸಿ, ಸುಧೀರ್ಘ ವಿಚಾರಣೆ ನಂತರ ಆರೋಪ ಸಾಬೀತಾಗಿದ್ದು, ಇದೀಗ ಅಪರಾಧಿಗೆ 14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.