Monday, June 15, 2026
Google search engine

Homeಕ್ರೀಡೆಪಾಕಿಸ್ತಾನದ ವಿರುದ್ಧ 64 ರನ್‌ ಗಳ ಭರ್ಜರಿ ಜಯ : ದಾಖಲೆ ಬರೆದ ಭಾರತೀಯ ಮಹಿಳಾ...

ಪಾಕಿಸ್ತಾನದ ವಿರುದ್ಧ 64 ರನ್‌ ಗಳ ಭರ್ಜರಿ ಜಯ : ದಾಖಲೆ ಬರೆದ ಭಾರತೀಯ ಮಹಿಳಾ ತಂಡ

ನವದೆಹಲಿ : ಮಹಿಳಾ ಟಿ20 ವಿಶ್ವಕಪ್‌ ನಲ್ಲಿ ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸುವ ಮೂಲಕ ಭಾರತವು ರನ್‌ಗಳ ಅಂತರದಲ್ಲಿ ತನ್ನ ಐದನೇ ಅತಿದೊಡ್ಡ ಜಯ ದಾಖಲಿಸಿದೆ. ಭಾನುವಾರ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ತಂಡ 17 ಓವರ್‌ ಗಳಲ್ಲಿ ಕೇವಲ 106 ರನ್‌ ಗಳಿಗೆ ಆಲೌಟ್ ಆಯಿತು.

ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತದ ಅತಿದೊಡ್ಡ ಗೆಲುವುಗಳು (ರನ್‌ಗಳ ಅಂತರದಲ್ಲಿ)
ಕ್ರ.ಸಂ ಎದುರಾಳಿ ರನ್‌ಗಳ ಅಂತರ ವರ್ಷ/ಸ್ಥಳ
1 ಶ್ರೀಲಂಕಾ 82 ರನ್ 2024, ದುಬೈ
2 ಬಾಂಗ್ಲಾದೇಶ 79 ರನ್ ಸಿಲ್ಹೆಟ್
3 ಬಾಂಗ್ಲಾದೇಶ 72 ರನ್ 2016
4 ಶ್ರೀಲಂಕಾ 71 ರನ್ 2010
5 ಪಾಕಿಸ್ತಾನ 64 ರನ್ 2026, ಎಡ್ಜ್‌ಬಾಸ್ಟನ್

ಆರಂಭದಲ್ಲಿ ಕೇವಲ 18 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಾನ ಆಸರೆಯಾದರು. ಇವರಿಬ್ಬರು 63 ಎಸೆತಗಳಲ್ಲಿ 91 ರನ್‌ಗಳ ಅಮೋಘ ಜೊತೆಯಾಟವಾಡಿದರು.

ಸ್ಮೃತಿ ಮಂಧಾನ 44 ಎಸೆತಗಳಲ್ಲಿ 68 ರನ್ ಸಿಡಿಸಿದರೆ, ಕೌರ್ 35 ಎಸೆತಗಳಲ್ಲಿ 36 ರನ್ ಗಳಿಸಿದರು. ಕೊನೆಯಲ್ಲಿ ರಿಚಾ ಘೋಷ್ (34 ರನ್) ಮತ್ತು ದೀಪ್ತಿ ಶರ್ಮಾ (ಅಜೇಯ 12 ರನ್) 21 ಎಸೆತಗಳಲ್ಲಿ 45 ರನ್ ಸೇರಿಸಿ ತಂಡದ ಮೊತ್ತವನ್ನು 170ಕ್ಕೆ ತಲುಪಿಸಿದರು.

ದೀಪ್ತಿ ಶರ್ಮಾ ಮಾರಕ ದಾಳಿ

ಬೌಲಿಂಗ್‌ನಲ್ಲಿ ಮಿಂಚಿದ ದೀಪ್ತಿ ಶರ್ಮಾ ಕೇವಲ 10 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಪಾಕಿಸ್ತಾನದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಶ್ರೀ ಚರಣಿ 3 ವಿಕೆಟ್ ಹಾಗೂ ಶೆಫಾಲಿ ವರ್ಮಾ 1 ವಿಕೆಟ್ ಪಡೆದರು.

ಮುಖಾಮುಖಿ ದಾಖಲೆ

ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಇದು 7ನೇ ಜಯ (ಒಟ್ಟು 9 ಪಂದ್ಯಗಳಲ್ಲಿ). ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ 9ರಲ್ಲಿ 8 ಪಂದ್ಯಗಳನ್ನು ಗೆದ್ದಿದೆ. ನ್ಯೂಜಿಲೆಂಡ್ ತಂಡ ಶ್ರೀಲಂಕಾ ವಿರುದ್ಧ ಆಡಿದ ಎಲ್ಲಾ 7 ಪಂದ್ಯಗಳಲ್ಲೂ ಜಯಭೇರಿ ಬಾರಿಸಿದೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular