Wednesday, January 14, 2026
Google search engine

Homeರಾಜ್ಯಸುದ್ದಿಜಾಲಅರಮನೆ ಬಳಿ ರಾತ್ರೋರಾತ್ರಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆ ಪ್ರತಿಷ್ಠಾಪನೆ

ಅರಮನೆ ಬಳಿ ರಾತ್ರೋರಾತ್ರಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆ ಪ್ರತಿಷ್ಠಾಪನೆ

ಮೈಸೂರು: ಅರಮನೆ ಬಳಿ ರಾತ್ರೋರಾತ್ರಿ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಗನ್‌ಹೌಸ್ ವೃತ್ತದ ಬಳಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರತಿಮೆಯನ್ನು ರಾತ್ರೋರಾತ್ರಿ ಕಾನೂನು ಉಲ್ಲಂಘಿಸಿ ಪ್ರತಿಷ್ಠಾಪನೆ ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಜಿಲ್ಲಾಡಳಿತ, ಸುತ್ತೂರು ಮಠದ ನಡುವೆ ಪತ್ರ ವ್ಯವಹಾರ ನಡೆದಿತ್ತು.

ಇದೀಗ ಏಕಾಏಕಿ ಖಾಲಿ ತಳಹದಿ ಮೇಲೆ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದ್ದು, ಹಲವು ವರ್ಷಗಳಿಂದ ವಿವಾದವಾಗಿ ಉಳಿದಿದ್ದ ಪ್ರತಿಮೆ ನಿರ್ಮಾಣ ವಿಚಾರ ಮುಂದಿನ ದಿನಗಳಲ್ಲಿ ವಿವಾದ ಆಗುವ ಸಾಧ್ಯತೆ ಇದೆ. ಅನಧಿಕೃತವಾಗಿ ಪ್ರತಿಮೆ ನಿಲ್ಲಿಸಿರುವುದರಿಂದ ಕೂಡಲೇ ತೆರವು ಮಾಡಬೇಕು ಎಂದು ಅರಸು ಸಮುದಾಯ ಮುಖಂಡರು ಪ್ರತಿಭಟನೆ ನಡೆಸಿದರು.

RELATED ARTICLES
- Advertisment -
Google search engine

Most Popular