ಚಾಮರಾಜನಗರ : ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ನಗರದ ಪ್ರಸಿದ್ಧ ರೋಟಿ ಘರ್ ರೆಸ್ಟೋರಂಟ್ ವತಿಯಿಂದ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ವಿಮೆ ಪಾಲಿಸಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಮಿಕರು ಯಾವುದೇ ಸಂಸ್ಥೆಯ ಬೆನ್ನೆಲುಬು ಎಂಬ ಅರಿವಿನಿಂದ, ಅವರ ಭದ್ರತೆ ಹಾಗೂ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮಾಲೀಕರೂ ಹಾಗೂ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿಯಾದ ಪ್ರತಾಪ್ ಎಸ್ ಅವರು, “ನಮ್ಮ ರೆಸ್ಟೋರಂಟ್‌ನ ಬೆಳವಣಿಗೆಗೆ ಕಾರ್ಮಿಕರ ಪರಿಶ್ರಮವೇ ಮೂಲ ಕಾರಣ. ಅವರ ಭವಿಷ್ಯ ಭದ್ರತೆಗೆ ನಾವು ಸದಾ ಬದ್ಧರಾಗಿದ್ದೇವೆ” ಎಂದು ತಿಳಿಸಿದರು.
ವಿತರಿಸಲಾದ ವಿಮೆ ಪಾಲಿಸಿಗಳು ಆರೋಗ್ಯ ಹಾಗೂ ಅಪಘಾತ ಸಂದರ್ಭಗಳಲ್ಲಿ ಆರ್ಥಿಕ ನೆರವನ್ನು ಒದಗಿಸುವಂತಿದ್ದು, ಕಾರ್ಮಿಕರ ಜೀವನದಲ್ಲಿ ಭದ್ರತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ನೆರವಾಗಲಿವೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ರೋಟಿಗರ್ ಪ್ರತಾಪ್ ಎಸ್ , ಇಫ್ಕೊ ಟೊಕ್ಯೋ ವಿಮೆ ಕಂಪನಿಯ ಸಹಾಯಕ ವ್ಯವಸ್ಥಾಪಕರು ಪ್ರಮೋದ್ ಸಿ , ಹೋಟೆಲ್ ಸಿಬ್ಬಂದಿ ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಎಲ್ಲಾ ಕಾರ್ಮಿಕರಿಗೆ ವಿಮೆ ಪಾಲಿಸಿಗಳನ್ನು ವಿತರಿಸಲಾಯಿತು



