Saturday, April 11, 2026
Google search engine

Homeಕ್ರೀಡೆIPL 2026: CSK ತಂಡಕ್ಕೆ ಧೋನಿ ಕಮ್‌ಬ್ಯಾಕ್ ಡೇಟ್ ಫಿಕ್ಸ್!

IPL 2026: CSK ತಂಡಕ್ಕೆ ಧೋನಿ ಕಮ್‌ಬ್ಯಾಕ್ ಡೇಟ್ ಫಿಕ್ಸ್!

ಚೆನ್ನೈ: ಐಪಿಎಲ್ 2026ರ ಆವೃತ್ತಿಯಲ್ಲಿ ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್‌ (CSK) ತಂಡಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಸಿಎಸ್‌ಕೆ ತಂಡದ ಸ್ಫೋಟಕ ಬ್ಯಾಟರ್‌ಗಳು ಮತ್ತೆ ತಂಡಕ್ಕೆ ವಾಪಸ್ಸಾಗುತ್ರತಿದ್ದರೆ, ಅಭಿಮಾನಿಗಳ ಆರಾಧ್ಯ ದೈವ ಎಂ.ಎಸ್. ಧೋನಿ ಅವರೂ ಸಹ ಪಂದ್ಯ ಡುವುದರ ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದೆ.

ಸೀಸನ್ ಆರಂಭಕ್ಕೂ ಮುನ್ನ ಅಭ್ಯಾಸದ ವೇಳೆ ಗಾಯಗೊಂಡಿದ್ದ ದಕ್ಷಿಣ ಆಫ್ರಿಕಾದ ಯುವ ಪ್ರತಿಭೆ ಡೆವಾಲ್ಡ್ ಬ್ರೆವಿಸ್, ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಇಂದು ಚೆಪಾಕ್ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಬ್ರೆವಿಸ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಮಧ್ಯಮ ಕ್ರಮಾಂಕದಲ್ಲಿ ರನ್ ಬರ ಎದುರಿಸುತ್ತಿರುವ ಸಿಎಸ್‌ಕೆಗೆ ಬ್ರೆವಿಸ್ ಆಗಮನ ಆನೆಯ ಬಲ ನೀಡಲಿದೆ. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಇವರ ಸಾಮರ್ಥ್ಯವು ತಂಡದ ರನ್ ವೇಗಕ್ಕೆ ವೇಗವರ್ಧಕವಾಗಲಿದೆ.

ನ್ನೂ ಎಂ.ಎಸ್. ಧೋನಿ ಅವರ ಫಿಟ್ನೆಸ್ ಬಗ್ಗೆ ಇದ್ದ ಆತಂಕಗಳು ಈಗ ದೂರವಾಗುತ್ತಿವೆ. ವರದಿಗಳ ಪ್ರಕಾರ, ಧೋನಿ ತಮ್ಮ ಮೊದಲ ಹಂತದ ಫಿಟ್ನೆಸ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಶೀಘ್ರದಲ್ಲೇ ಎರಡನೇ ಹಂತದ ಪರೀಕ್ಷೆ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಏಪ್ರಿಲ್ 14 ರಂದು ಕೋಲ್ಕತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ ಧೋನಿ ಮೈದಾನಕ್ಕಿಳಿಯಲಿದ್ದಾರೆ.

ಧೋನಿ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಜವಾಬ್ದಾರಿ ಹೊತ್ತಿದ್ದ ಸಂಜು ಸ್ಯಾಮ್ಸನ್, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಅವರ ಸ್ಕೋರ್ ನೋಡುವುದಾದರೆ,

  • ರಾಜಸ್ಥಾನ ರಾಯಲ್ಸ್ ವಿರುದ್ಧ: 6 ರನ್
  • ಪಂಜಾಬ್ ಕಿಂಗ್ಸ್ ವಿರುದ್ಧ: 7 ರನ್
  • ಆರ್‌ಸಿಬಿ ವಿರುದ್ಧ: 9 ರನ್

ವಿಶ್ವಕಪ್‌ನಲ್ಲಿ ಮಿಂಚಿದ್ದ ಸಂಜು, ಚೆನ್ನೈ ಜೆರ್ಸಿಯಲ್ಲಿ ರನ್ ಗಳಿಸಲು ಪರದಾಡುತ್ತಿರುವುದು ಮ್ಯಾನೇಜ್‌ಮೆಂಟ್‌ಗೆ ತಲೆನೋವಾಗಿದೆ. ಬ್ರೆವಿಸ್ ತಂಡಕ್ಕೆ ಸೇರ್ಪಡೆಯಾಗುವುದರಿಂದ ಸಂಜು ಅವರ ಸ್ಥಾನದ ಮೇಲೆ ಒತ್ತಡ ಬೀಳುವ ಸಾಧ್ಯತೆಯಿದೆ.

RELATED ARTICLES
- Advertisment -
Google search engine

Most Popular