Sunday, March 8, 2026
Google search engine

Homeಸ್ಥಳೀಯಮಹಿಳೆಯರ ಸಾಧನೆಗೆ ಗೌರವ ಸಲ್ಲಿಸಿದ ಜೈ ಹಿಂದ್ ಪ್ರತಿಷ್ಠಾನ

ಮಹಿಳೆಯರ ಸಾಧನೆಗೆ ಗೌರವ ಸಲ್ಲಿಸಿದ ಜೈ ಹಿಂದ್ ಪ್ರತಿಷ್ಠಾನ

ಬೆಂಗಳೂರು : ಮಹಿಳೆಯರಿಗೆ ಗೌರವ ಸಲ್ಲಿಸುವ ಹಾಗೂ ಅವರ ಸಾಧನೆಗಳನ್ನು ಗೌರವಿಸುವ ದಿನವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಬದಲಾಗುತ್ತಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ಜೈ ಹಿಂದ್ ಪ್ರತಿಷ್ಠಾನದ ಉಪಾಧ್ಯಕ್ಷರಾದ ಕೆವಿ ಶ್ರೀಮತಿ ( ನಾಗರತ್ನ) ತಿಳಿಸಿದರು.

ಅವರು ಬೆಂಗಳೂರಿನ ನಾಗರಭಾವಿ ಶ್ರೀ ವೇಣುಗೋಪಾಲ ಸ್ವಾಮಿ ಸಮುದಾಯ ಭವನದಲ್ಲಿ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂಥ್ ಕ್ಲಬ್ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡುತ್ತಾ ಜೈ ಹಿಂದ್ ಪ್ರತಿಷ್ಠಾನ ಹಲವಾರು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸುಮಾರು 3000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಿರಂತರವಾಗಿ ನೆರವೇರಿಸಿಕೊಂಡು ಬಂದಿದೆ ಚಾಮರಾಜನಗರ ಜಿಲ್ಲೆಯಲ್ಲಿ ಸದಾಕಾಲ ಕ್ರಿಯಾಶೀಲವಾಗಿ ಹಲವಾರು ಕಾರ್ಯಕ್ರಮವನ್ನು ರೂಪಿಸಿ ಜಾಗೃತಿ ಮೂಡಿಸುತ್ತಿರುವ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಕ್ಲಬ್ ಮತ್ತಷ್ಟು ಸಾಧನೆಯನ್ನು ಮಾಡಲಿ ಎಂದರು.

ಜೈಹಿಂದ್ ಪ್ರತಿಷ್ಠಾನದಿಂದ ಮಹಿಳೆಯರಿಗೆ ಹೂಗುಚ್ಚ ನೀಡಿ ಶುಭಾಶಯಗಳನ್ನು ಸಲ್ಲಿಸಲಾಯಿತು
ಚಿಂತಕ ,ಉಪನ್ಯಾಸಕ ,ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ
ಮಾತೃ ಸ್ವರೂಪಿಯಾದ ತಾಯಿಯ ಋಣ ತೀರಿಸುವುದು ಅಸಾಧ್ಯ. ಭಾರತೀಯರಾದ ನಾವೆಲ್ಲರೂ ಪುಣ್ಯವಂತರು. ನಮ್ಮ ತಾಯಿನಾಡು ಭಾರತ. ಮಾತೃ ಸ್ವರೂಪವಾದ ಭಾರತಮಾತೆಯ ಮಕ್ಕಳಾಗಿದ್ದೇವೆ.ತಾಯಿಯ ಗರ್ಭದಲ್ಲಿ ಜನಿಸುವ ಮೂಲಕ ಮಾತೃ ರಕ್ಷಣೆಯಲ್ಲಿ ಜೀವನವನ್ನು ನಿರ್ವಹಿಸುತ್ತೇವೆ.

ಪ್ರತಿಕ್ಷೇತ್ರದಲ್ಲೂ ಭಾರತೀಯರು ಮಹಿಳೆಯರಿಗೆ ಅಪಾರ ಗೌರವವನ್ನು ನೀಡುವ ಮೂಲಕ ಸಂಸ್ಕೃತಿ ,ಸಂಸ್ಕಾರ, ಸಮರ್ಪಣೆಯ ಭಾವವನ್ನು ಜೀವನದಲ್ಲಿ ತುಂಬಿಕೊಳ್ಳುವ ಮೂಲಕ ತಾಯಿಗೆ ಗೌರವವನ್ನು ಸಲ್ಲಿಸಬೇಕು. ಮಹಿಳೆಯರ ಋಣವನ್ನು ತೀರಿಸುವುದು ಅಸಾಧ್ಯ. ತಾಯಿಯಾಗಿ, ಅಕ್ಕನಾಗಿ ಹೆಂಡತಿಯಾಗಿ ,ತಂಗಿಯಾಗಿ ಹಲವು ಸ್ವರೂಪದಲ್ಲಿ ಮಾತೃ ರೂಪದಲ್ಲಿ ಕಾಣಿಸಿಕೊಳ್ಳುವ ಮಹಿಳೆಯರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಗೌರವವನ್ನು ನೀಡಬೇಕು .ಪ್ರತಿಯೊಬ್ಬ ಮಹಿಳೆಯರ ಕೊಡುಗೆ ಅಪಾರ. ಆಧುನಿಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಕೊಡುಗೆ ವರ್ಣಿಸಲು ಅಸಾಧ್ಯ. ವಿಜ್ಞಾನ ,ತಂತ್ರಜ್ಞಾನ , ಬಾಹ್ಯ ಕಾಶ,ಸಂಶೋಧನೆ, ಶಿಕ್ಷಣ, ಆರೋಗ್ಯ ,ನೀರಾವರಿ, ಕೈಗಾರಿಕೆ ಹತ್ತು ಹಲವು ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಯನ್ನು ಮಹಿಳೆಯರು ಸಾಧಿಸುತ್ತಿದ್ದಾರೆ .ಶಿಕ್ಷಣದಲ್ಲೂ ಅಪಾರ ಜ್ಞಾನ ಪಡೆಯುತ್ತಿರುವ ಹೆಣ್ಣು ಮಕ್ಕಳಿಂದ ಭಾರತ ಸಮೃದ್ಧ ರಾಷ್ಟ್ರವಾಗಿ ವಿಶ್ವಕ್ಕೆ ಜಗದ್ಗುರುವಾಗಿ ರೂಪಿತವಾಗುತ್ತಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಶ್ರೀಮತಿ ಕೆವಿ ನಾಗರತ್ನ, ಗುಂಡ್ಲುಪೇಟೆ ರಮೇಶ್, ಜಗನ್ನಾಥ,ಕುಸುಮಾ ಋಗ್ವೇದಿ, ಆಶಾರಾವ್, ರಕ್ಷಾದೀಪಕ್, ಶರಣ್ಯ, ಸಾನಿಕ, ಸಿಂಚನ, ಶ್ರಾವ್ಯ, ಜಗನ್ನಾಥ್ , ಕಾರ್ತಿಕ್, ಸುಹಾಸ್ ಭಾರದ್ವಾಜ್,ಧನುಷ್, ವರ್ಚಸ್ ಇದ್ದರು.

RELATED ARTICLES
- Advertisment -
Google search engine

Most Popular