Wednesday, June 25, 2025
Google search engine

HomeUncategorizedರಾಷ್ಟ್ರೀಯಜೈ ಹಿಂದ್, ಜೈ ಭಾರತ್: ಬಾಹ್ಯಾಕಾಶದಲ್ಲೂ ಭಾರತ ನನ್ನೊಂದಿಗೆ, ಬಾಹ್ಯಾಕಾಶದಿಂದ ಭಾರತಕ್ಕೆ ಶುಕ್ಲಾದ ಹೆಮ್ಮೆಯ ಸಂದೇಶ

ಜೈ ಹಿಂದ್, ಜೈ ಭಾರತ್: ಬಾಹ್ಯಾಕಾಶದಲ್ಲೂ ಭಾರತ ನನ್ನೊಂದಿಗೆ, ಬಾಹ್ಯಾಕಾಶದಿಂದ ಭಾರತಕ್ಕೆ ಶುಕ್ಲಾದ ಹೆಮ್ಮೆಯ ಸಂದೇಶ

ನವದೆಹಲಿ: ಭಾರತದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯುತ್ತಿರುವ ಗಗನಯಾತ್ರಿ ಶುಭಾಂಶು ಶುಕ್ಲಾ, ತಮ್ಮ ಐತಿಹಾಸಿಕ ಬಾಹ್ಯಾಕಾಶ ಯಾತ್ರೆಯ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (International Space Station – ISS) ಭಾರತದ ಜನತೆಗೆ ಮೊದಲ ಸಂದೇಶ ಕಳುಹಿಸಿದ್ದಾರೆ. “ಜೈ ಹಿಂದ್, ಜೈ ಭಾರತ್” ಎಂಬ ಘೋಷಣೆ ನೀಡುವ ಮೂಲಕ ಅವರು ನನ್ನ ಭುಜದಲ್ಲಿ ತ್ರಿವರ್ಣ ಧ್ವಜವಿದೆ.. ಭಾರತವೇ ನನ್ನ ಜೊತೆಗಿದೆ ಎಂದು ಶುಕ್ಲಾ ತಮ್ಮ ಮೊದಲ ಸಂದೇಶ ಹಂಚಿಕೊಂಡಿದ್ದಾರೆ.

ಸ್ಪೇಸ್‌ಎಕ್ಸ್‌ನ ‘ಫಾಲ್ಕನ್‌-9’ ರಾಕೆಟ್‌ ಬಾಹ್ಯಾಕಾಶಕ್ಕೆ ಹಾರುತ್ತಿದ್ದಂತೆ, ಮಿಷನ್‌ನ ಪೈಲಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಭಾರತವನ್ನುದ್ದೇಶಿಸಿ ‘ನಮಸ್ಕಾರ’ ಎಂಬ ಪದದೊಂದಿಗೆ ಮಾತು ಆರಂಭಿಸಿದರು.

‘ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ.. 41 ವರ್ಷಗಳ ನಂತರ ನಾವು ಬಾಹ್ಯಾಕಾಶವನ್ನು ತಲುಪಿದ್ದೇವೆ. ಇದು ಒಂದು ಉತ್ತಮ ಸವಾರಿಯಾಗಿತ್ತು. ಎಂದು ಶುಭಾಂಶು ಶುಕ್ಲಾ ಭಾರತಕ್ಕಾಗಿ ತಮ್ಮ ಆರಂಭಿಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಕೆಟ್‌ ಸೆಕೆಂಡಿಗೆ 4.5 ಕಿ.ಮೀ ವೇಗದಲ್ಲಿ ಭೂಮಿಯ ಸುತ್ತಲೂ ಹಾರುತ್ತಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಭುಜದಲ್ಲಿ ಭಾರತೀಯ ತ್ರಿವರ್ಣ ಧ್ವಜವಿದೆ. ಧ್ವಜವು ಬಾಹ್ಯಾಕಾಶ ಹಾರಾಟದಲ್ಲಿ ಭಾರತವೇ ನನ್ನ ಜೊತೆಗಿದೆ ಎಂಬುದನ್ನು ನೆನಪಿಸುತ್ತದೆ. ಇದು ಐಎಸ್‌ಎಸ್‌ಗೆ ನನ್ನ ಪ್ರಯಾಣದ ಆರಂಭ ಮಾತ್ರವಲ್ಲ, ಭಾರತದ ಮಾನವ ಬಾಹ್ಯಾಕಾಶ ಹಾರಾಟದ ಆರಂಭವೂ ಆಗಿದೆ. ನೀವು ಪ್ರತಿಯೊಬ್ಬರೂ ಈ ಪ್ರಯಾಣದ ಭಾಗವಾಗಬೇಕೆಂದು ನಾನು ಬಯಸುತ್ತೇನೆ. ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮವನ್ನು ಒಟ್ಟಿಗೆ ಪ್ರಾರಂಭಿಸೋಣ ಎಂದು ಎಂದಿದ್ದಾರೆ.

RELATED ARTICLES
- Advertisment -
Google search engine

Most Popular