Saturday, January 17, 2026
Google search engine

Homeರಾಜ್ಯಸಿದ್ದರಾಮಯ್ಯಗೆ ಜೈಲು ಗ್ಯಾರಂಟಿ : ಛಲವಾದಿ ನಾರಾಯಣಸ್ವಾಮಿ

ಸಿದ್ದರಾಮಯ್ಯಗೆ ಜೈಲು ಗ್ಯಾರಂಟಿ : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಮುಡಾ ಕೇಸ್‌ನ ಚಿಂತೆಯಲ್ಲಿದ್ದಾರೆ. ಅವರು ಜೈಲಿಗೆ ಹೋಗೋದನ್ನ ತಪ್ಪಿಸಲು ಆಗಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬಸ್ ನಿರ್ವಾಹಕನ ಮೇಲೆ ಪುಂಡಾಟಿಕೆ ನಡೆದಿದೆ. ಕೋರಮಂಗಲದಲ್ಲಿ ಸಾಮೂಹಿಕ ಅತ್ಯಾಚಾರವಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರ ಎಸ್‌ಸಿಪಿ, ಟಿಎಸ್‌ಪಿ ಹಣವನ್ನ ಲೂಟಿ ಮಾಡಿದ್ದಾರೆ. ದಲಿತರ ಹಣ ಲೂಟಿ ಮಾಡಿ ಸರ್ವರಿಗೂ ಗ್ಯಾರಂಟಿ ಕೊಡುತ್ತಿದ್ದಾರೆ. ದಲಿತರಿಗೆ ಮೋಸ ಮಾಡಿದ್ರೆ ಕೋರ್ಟ್ ಹೋಗುತ್ತೇವೆ. ರಾಜ್ಯಾದ್ಯಂತ ೧೪ ತಂಡಗಳು ಕೆಲಸ ಮಾಡುತ್ತಿವೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

RELATED ARTICLES
- Advertisment -
Google search engine

Most Popular