ಮಂಡ್ಯ: ಮಂಡ್ಯದಲ್ಲಿ ಜನತಾ ದರ್ಶನ ಪಾಲಿಟಿಕ್ಸ್ ಶುರುವಾಗಿದೆಯೇ ಎಂಬ ಮಾತು ಕೇಳಿಬರುತ್ತಿದೆ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಜನತಾ ದರ್ಶನದ ಬೆನ್ನಲ್ಲೆ ರಾಜ್ಯ ಸಚಿವ ಚಲುವರಾಯಸ್ವಾಮಿಯಿಂದ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಂಡ್ಯದ ಕೆರಗೋಡು ಗ್ರಾಮದಲ್ಲಿ ಶಾಸಕ ರವಿಕುಮಾರ್ ಗೌಡ ಅಧ್ಯಕ್ಷತೆಯಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಯಲಿದೆ.
ಜನತಾ ದರ್ಶನದಲ್ಲಿ 53 ಇಲಾಖೆಗಳ ಜಿಲ್ಲೆಯ ಅಧಿಕಾರಿಗಳು ಖುದ್ದು ಹಾಜರಾಗಲಿದ್ದಾರೆ.
ಹನುಮ ಧ್ಚಜ ವಿವಾದದ ಗ್ರಾಮದಲ್ಲೇ ಜನತಾ ದರ್ಶನ ಕಾರ್ಯಕ್ರಮ ಆಯೋಜನೆ ಮಾಡಿ ಬಿಜೆಪಿಗೆ ಸೆಡ್ಡು ಹೊಡೆಯಲಾಗಿದೆ.
ಬೆಳಿಗ್ಗೆ 11ಕ್ಕೆ ಜನತಾ ದರ್ಶನ ಕಾರ್ಯಕ್ರಮವನ್ನು ಸಚಿವ ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ.
ಜನತಾ ದರ್ಶನದಲ್ಲಿ ಡಿಸಿ ಸೇರಿ ಅಧಿಕಾರಿಗಳ ವರ್ಗ ಭಾಗಿಯಾಗಲಿದ್ದಾರೆ.
ಹನುಮ ಧ್ವಜ ವಿವಾದಿತ ಗ್ರಾಮ ಕೆರಗೋಡು ಗ್ರಾಮಕ್ಕೆ ಹೊಸ ರೂಪಕೊಡಲು ಕೈ ನಾಯಕರು ತಂತ್ರ ರೂಪಿಸಿದ್ದು, ಅದೇ ಗ್ರಾಮದಲ್ಲಿ ಕಾರ್ಯಕ್ರಮ ಮಾಡಿ ಜೆಡಿಎಸ್-ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಪ್ಲಾನ್ ಮಾಡಿದೆ.