- ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಧರ್ಮಸ್ಥಳ ತಲುಪಿದ ಪಾದಯಾತ್ರೆ
ಮಂಗಳೂರು: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಜೆಡಿಎಸ್ ನಿಂದ ಧರ್ಮ ಸತ್ಯ ಯಾತ್ರೆ ಕೈಗೊಳ್ಳಲಾಗಿದೆ. ಇಂತಹ ಧರ್ಮ ಸತ್ಯ ಯಾತ್ರೆ ಇದೀಗ ಶ್ರೀಕ್ಷೇತ್ರ ಧರ್ಮಸ್ಥಳವನ್ನು ತಲುಪಿದೆ.
ಶ್ರೀಕ್ಷೇತ್ರ ಧರ್ಮಸ್ಥಳವನ್ನು ಜೆಡಿಎಸ್ ನ ಧರ್ಮ ಸತ್ಯ ಯಾತ್ರೆ ತಲುಪಿದೆ. ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಈ ಯಾತ್ರೆ ನಡೆಯುತ್ತಿದೆ.
ಧರ್ಮಸ್ಥಳ ಸತ್ಯಯಾತ್ರೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸುರೇಶ್ ಬಾಬು, ಲೋಕಸಭಾ ಸದಸ್ಯರಾದ ಶ್ರೀ ಮಲ್ಲೇಶ್ ಬಾಬು, ಶಾಸಕರಾದ ಶ್ರೀ ಹರೀಶ್ ಗೌಡ, ಶ್ರೀ ಸ್ವರೂಪ್ ಪ್ರಕಾಶ್,
ದೇವದುರ್ಗ ಶಾಸಕರಾದ ಶ್ರೀಮತಿ ಕರೇಯಮ್ಮ ನಾಯಕ್ ಅವರು. ಶಾಸರಾದ ಶ್ರೀಮತಿ ಶಾರದಾ ಪೂರ್ಯನಾಯ್ಕ ಶ್ರವಣಬೆಳಗೊಳ ಶಾಸಕರಾದ ಶ್ರೀ ಬಾಲಕೃಷ್ಣ , ಕೆ.ಆರ್. ಪೇಟೆ ಶಾಸಕರಾದ ಶ್ರೀ ಮಂಜುನಾಥ್, ಶಾಸಕರಾದ ಶ್ರೀ ನೇಮಿರಾಜ್ ನಾಯಕ್, ರಾಜ್ಯ ಕೋರ ಕಮೀಟಿ ಸದಸ್ಯರಾದ ಶ್ರೀ ವೆಂಕಟರಾವ್ ನಾಡಗೌಡ, ವಿಧಾನಪರಿಷತ್ ಸದಸ್ಯರಾದ ಶ್ರೀ ಬೋಜೆಗೌಡ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕರಾದ ಶ್ರೀ ಸುರೇಶ್ ಗೌಡ, ಶ್ರೀ ಹೆಚ್.ಕೆ. ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ಇಂಚರಾ ಗೋವಿಂದರಾಜು, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಶ್ರೀಮತಿ ರಶ್ಮಿ ರಾಮೇಗೌಡ, ಹರಿಹರ ಮಾಜಿ ಶಾಸಕರಾದ ಶ್ರೀ ಹೆಚ್. ಸಿದ್ದಲಿಂಗೇಶ್, ಬಾದಮಿಯ ಶ್ರೀ ಹನಮಂತಪ್ಪ ಮಾವಿನಮರದ, ಶ್ರೀ ಅಪ್ಪುಗೌಡ, ಶ್ರೀಮತಿ ಶಾರದಾ ಅಪ್ಪಾಜಿಗೌಡ, ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ತುಪಲ್ಲಿ ಚೌಡರೆಡ್ಡಿ, ಶ್ರೀ ಸಿ.ವಿ. ಚಂದ್ರಶೇಖರ, ಮಾಜಿ ಶಾಸಕರಾದ ಶ್ರೀ ನಿಸರ್ಗ ನಾರಾಯಣಸ್ವಾಮಿ,ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ರಮೇಶ್ ಗೌಡ, ಮನ್ ಮುಲ್ ಮಾಜಿ ಅಧ್ಯಕ್ಷರಾದ ಶ್ರೀ ರಾಮಚಂದ್ರ, ಮೈಮುಲ್ ಮಾಜಿ ಅಧ್ಯಕ್ಷರಾದ ಶ್ರೀ ಪ್ರಸನ್ ಕುಮಾರ್, ಮುಖಂಡರಾದ ಶ್ರೀ ಎನ್.ಆರ್. ಸಂತೋಷ, ಶ್ರೀ ಸಿರಾ ಉಗ್ರೇಶ್, ಹಿರಿಯೂರು ಮಹಿಂದ್ರಪ್ಪ ಸೇರಿದಂತೆ ಮಾಜಿ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು, ಪಕ್ಷದ ಮುಖಂಡರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ಬಂಧುಗಳು , ಸಹಸ್ರರಾರು ಭಕ್ತರು ಉಪಸ್ಥಿತರಿದ್ದರು.