Tuesday, May 20, 2025
Google search engine

Homeರಾಜ್ಯಸುದ್ದಿಜಾಲಜೆಡಿಎಸ್ ಕಾರ್ಯಕರ್ತರು ಹತಾಶರಾಗಬೇಕಾಗಿಲ್ಲ: ಜಿ.ಟಿ ದೇವೇಗೌಡ

ಜೆಡಿಎಸ್ ಕಾರ್ಯಕರ್ತರು ಹತಾಶರಾಗಬೇಕಾಗಿಲ್ಲ: ಜಿ.ಟಿ ದೇವೇಗೌಡ

ಕೆ.ಆರ್.ನಗರ: ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಮುಖಂಡರು ಹತಾಶರಾಗಬೇಕಾಗಿಲ್ಲ ಮಾಜಿ ಸಚಿವ ಸಾ.ರಾ ಮಹೇಶ್ ಸ್ಥಳೀಯ ಮಟ್ಟದಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಿದ್ದು ಮುಂದಿನ ದಿನಗಳಲ್ಲಿ ಸಕ್ರಿಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂದು ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಖಾಸಗಿ ಕಾರ್ಯನಿಮಿತ್ತ ಆಗಮಿಸಿದ ಅವರನ್ನು ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದವರು ಹಲವಾರು ಕಾರಣಗಳಿಂದ ಸೋಲುಂಡಿರಬಹುದು ಆದರೆ ಈ ತಾಲೂಕಿಗೆ ಅವರ ಕೊಡುಗೆ ಅಪಾರವಾದದ್ದು ಹಾಗೂ ಜನಮನದಲ್ಲಿರುವಂತ ಅಭಿವೃದ್ಧಿ ಕಾರ್ಯವನ್ನು ಮಾಡಿರುವುದರಿಂದ ಅವರನ್ನು ಜನ ಮರೆತಿಲ್ಲ ಎಂದು ತಿಳಿಸಿದರು.

ಜೆಡಿಎಸ್ ಬಿಜೆಪಿ ಹೊಂದಾಣಿಕೆ ಬಗ್ಗೆ ಮಾತನಾಡಿದ ಕೋರ್ ಕಮಿಟಿಯ ಅಧ್ಯಕ್ಷರು ರಾಜ್ಯದಲ್ಲಿ ಭ್ರಷ್ಟಾಚಾರ ಕಾಂಗ್ರೆಸ್ಸನ್ನು ತೊಲಗಿಸುವ ಉದ್ದೇಶದಿಂದ ರಾಷ್ಟ್ರೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗಿದ್ದು ಯಾವ್ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಬಲಿಷ್ಠವಾಗಿದೆ ಎಂಬುದನ್ನು ಚರ್ಚಿಸಿ ಸೀಟು ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಅನಂತರ ಯಾವ್ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯನ್ನು ನಿಲ್ಲಿಸಬೇಕೆಂಬುದು ತೀರ್ಮಾನವಾಗಲಿದೆ ಎಂದರು. ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಾ ರಾ ಮಹೇಶ್ ಆಗಲಿ ನಾನಾಗಲಿ ಸ್ಪರ್ಧೆ ಮಾಡುವ ವಿಚಾರ ಚರ್ಚೆಯಾಗಿಲ್ಲ ಆದರೆ ಜೆಡಿಎಸ್ ಪಕ್ಷದ ವರಿಷ್ಠರು ಯಾರು ಯಾರು ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಚರ್ಚಿಸಿ ನಿರ್ಧರಿಸುತ್ತಾರೋ ಆ ಕ್ಷೇತ್ರದಲ್ಲಿ ವರಿಷ್ಠರು ಸೂಚಿಸಿದ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪರ್ಧಿಸುವಂತೆ ಮಂಡ್ಯ ಲೋಕಸಭಾ ವ್ಯಾಪ್ತಿಯ ಕಾರ್ಯಕರ್ತರು ಮತ್ತು ಮುಖಂಡರು ಒತ್ತಡ ಹೇರುತ್ತಿದ್ದಾರೆ ಆದರೆ ಯಾವುದು ಚರ್ಚೆಯಾಗಿಲ್ಲ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಗ್ಗಟ್ಟಿನಿಂದ ಹೋರಾಡಲು ತೀರ್ಮಾನಿಸಿರುವುದರಿಂದ ಸಿಟು ಹೊಂದಾಣಿಕೆಯ ನಂತರ ಅಭ್ಯರ್ಥಿಗಳ ಆಯ್ಕೆ ಆಗಲಿದೆ ಎಂದು ತಿಳಿಸಿದರು. ಮೊಟ್ಟಮೊದಲ ಬಾರಿಗೆ ಬಿಜೆಪಿ ಜೊತೆ ಹೊಂದಾಣಿಕೆ ಮಾಡಬೇಕೆಂಬ ಮಾತನ್ನು ಪ್ರಾರಂಭಿಸಿದವರೇ ಉಚ್ಚಾಟಿತ ಜೆಡಿಎಸ್ ನಾಯಕ ಸಿಎಂ ಇಬ್ರಾಹಿಂ ರವರು ಆದರೆ ನಂತರ ತಮ್ಮ ಹಳೆಯವರೆಸೇನ್ನೇ ಬದಲಾಯಿಸಿದ್ದಾರೆ ಇದಕ್ಕೆಲ್ಲ ಕುಮ್ಮಕ್ಕು ಯಾರದು ಎಂಬುದನ್ನು ನೀವೇ ಅರ್ಥಮಾಡಿಕೊಳ್ಳಬೇಕು ಕಾಂಗ್ರೆಸಿನ ನಾಯಕರ ಮಾತು ಕೇಳಿಕೊಂಡು ಪಕ್ಷ ಒಡಯುವ ಹೂನಾರು ನಡೆಸಿರುವುದರಿಂದ ಅವರನ್ನು ಉಚ್ಚಾಟನೆ ಮಾಡಲಾಗಿದೆ ಅವರು ಕರೆದಿರುವ ಸಭೆಗೆ ಯಾವುದೇ ಕಿಮ್ಮತ್ತಿಲ್ಲ ಜಾತ್ಯತೀತವಾಗಿ ಪಕ್ಷವನ್ನು ಕಟ್ಟಿ ಬೆಳೆಸಿದಂತ ಜೆಡಿಎಸ್ ಪಕ್ಷದ ಸಂಸ್ಥಾಪಕ ಎಚ್ ಡಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ತೀರ್ಮಾನವೇ ಅಂತಿಮವಾಗಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯ ತನಕ ಕಾಯಿರಿ ಅನಂತರ ರಾಜ್ಯದ ಚಿತ್ರಣವೇ ಬದಲಾಗುವುದು ಎಂದು ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರ ಪತನದ ಬಗ್ಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ವಕ್ತಾರ ಕೆಎಲ್ ರಮೇಶ್, ಮುಖಂಡರುಗಳಾದ ಕೃಷ್ಣಶೆಟ್ಟಿ, ಮಿರ್ಲೆ ಸುಜಯ್ ಕುಮಾರ್ ಗೌಡ, ಮುಂಡೂರು ಮನು ಜಯರಾಮೇಗೌಡ, ಗೋವಿಂದೇಗೌಡ, ಮಂಜುನಾಥ್ ಹೊಸಳ್ಳಿ, ಪ್ರಕಾಶ್ ಡೈರಿ, ಆನಂದ, ಶಿಕ್ಷಕ ಪುರುಷೋತ್ತಮ್, ಡಾ. ದೀಪು ಪ್ರತಾಪ್ ರೆಡ್ಡಿ ,ಮೋಹನ,ಚಿಕ್ಕನಾಯಕನಹಳ್ಳಿ ಸುರೇಶ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular