ಹುಣಸೂರು: ಪತ್ರಕರ್ತ ದಿ. ಹೆಚ್.ಆರ್. ಶ್ರೀನಿವಾಸ್ ಅವರ ಸ್ಮರಣಾರ್ಥ ಪತ್ರಕರ್ತ ಹೆಚ್.ಎಸ್.ಸಚ್ಚಿತ್ ಅವರು ಸ್ಥಾಪಿಸಿರುವ ಜಿಲ್ಲಾ ಮಟ್ಟದ “ಜಿಲ್ಲಾ ಅತ್ಯುತ್ತಮ ಗ್ರಾಮೀಣಾಭಿವೃದ್ಧಿ ವರದಿ ಪ್ರಶಸ್ತಿಗೆ” ಕೆ ಆರ್ ನಗರ ತಾಲೂಕಿನ ಪ್ರತಿನಿಧಿ ಪತ್ರಿಕೆಯ ವರದಿಗಾರರಾದ ವಿನಯ್ ದೊಡ್ಡಕೊಪ್ಪಲು ರವರ ‘ಮೋಸ ತಡೆಯಬೇಕಾದವರೇ ಕಣ್ಮರೆ‘ ಎಂಬ ಗ್ರಾಮೀಣಾಭಿವೃದ್ಧಿ ಲೇಖನ ಆಯ್ಕೆ ಯಾಗಿದ್ದು, ಜು.20 ರಂದು ನಡೆಯುವ ಪತ್ರಿಕಾ ದಿನಾಚರಣೆಯಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವ ವಿನಯ್ ದೊಡ್ಡಕೊಪ್ಪಲು ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಸಂಘದ ಅಧ್ಯಕ್ಷ ಎಚ್ ಆರ್ ಕೃಷ್ಣಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ನೇರಳಕುಪ್ಪೆ ಮಹದೇವ್ ತಿಳಿಸಿದ್ದಾರೆ.