ವರದಿ ಎಡತೊರೆ ಮಹೇಶ್
ಎಚ್.ಡಿ.ಕೋಟೆ: ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ತಾಲೂಕಿನ ಕಟ್ಟೆಮನುಗನಹಳ್ಳಿ ಗ್ರಾಮದ ಯುವಕರು ಮಾರ್ಗ ಮಧ್ಯ ರಸ್ತೆ ಅಪಘಾತದಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ ಸಮಾಜ ಸೇವಕ ಕೆ.ಎಂ.ಕೃಷ್ಣನಾಯಕ ಗಾಯಾಳುಗಳಿಗೆ ನೆರವು ನೀಡಿದ್ದಾರೆ.
ಸಮಾಜ ಸೇವಕ ಕೆ.ಎಂ.ಕೃಷ್ಣ ನಾಯಕ ಮಾತನಾಡಿ, ಮೈಸೂರಿನಿಂದ ಮಾನಂದವಾಡಿ ಮಾರ್ಗದ ರಸ್ತೆಯು ಅವೈಜ್ಞಾನಿಕವಾಗಿದೆ. ನಿತ್ಯ ಕನಿಷ್ಠ ಎರಡು ಪ್ರಕರಣಗಳಾದರೂ ದಾಖಲಾಗುತ್ತಿವೆ. ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.

ತಾಲೂಕಿನಲ್ಲಿರುವ ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯಗಳಿಲ್ಲ. ಮಾತ್ರೆಗಳನ್ನು ಖಾಸಗಿ ಮೆಡಿಕಲ್ ಗೆ ಬರೆದುಕೊಡುತ್ತಾರೆ. ರಾತ್ರಿ ವೇಳೆ ವೈದ್ಯರಿರುವುದಿಲ್ಲ. ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಮೈಸೂರಿನ ಆಸ್ಪತ್ರೆಗೆ ತೆರಳುವಂತೆ ಸೂಚಿಸುತ್ತಾರೆ. ರೋಗಿಗಳು ಮೈಸೂರಿಗೆ ತೆರಳುವ ಮಾರ್ಗ ಮಧ್ಯೆ ಸಾವನ್ನಪ್ಪಿರುವ ಅನೇಕ ಉದಾಹರಣೆಗಳಿವೆ. ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಶಾಸಕರು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿಎಂ ವಿರುದ್ಧ ಕಿಡಿಕಾರಿದ ಕೃಷ್ಣನಾಯಕ: ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗಿನಿಂದ ನಾಲ್ಕು ಬಾರಿ ತಾಲೂಕಿಗೆ ಭೇಟಿ ನೀಡಿದ್ದಾರೆ. ಆದರೂ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಮೈಸೂರು-ಮಾನಂದವಾಡಿ ರಸ್ತೆ ಹದಗೆಟ್ಟಿದೆ. ಸಿಎಂ ಬರುವ ಮುನ್ನಾ ದಿನ ಅಧಿಕಾರಿಗಳು ತೇಪೆ ಹಾಕುವ ಕೆಲಸ ಮಾಡುತ್ತಾರೆ. ತಾಲೂಕಿನಲ್ಲಿ ಐಷಾರಾಮಿ ರೆಸಾರ್ಟ್ ಗಳಿರುವುದರಿಂದ ಸಿಎಂ ಆಗ್ಗಿಂದಾಗೆ ತಾಲೂಕಿಗೆ ಭೇಟಿ ನೀಡಿ ವಿಶ್ರಾಂತಿ ಪಡೆದು ತೆರಳುತ್ತಿದ್ದಾರೆ. ಇದೇ ಮಾರ್ಗದಲ್ಲಿ ತೆರಳುವ ಸಿಎಂ ಸಿದ್ದರಾಮಯ್ಯ ರಸ್ತೆ ಅಭಿವೃದ್ಧಿಪಡಿಸುಲು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು

ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್.ಆರ್ ಮಹದೇವಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಶಂಭೇಗೌಡ, ಮುಖಂಡರಾದ ಮೊತ್ತ ಬಸವರಾಜಪ್ಪ, ಸುರೇಶ್, ಚಂದ್ರು , ನಂಜನಾಯಕನಹಳ್ಳಿ ಗುರುಸ್ವಾಮಿ, ಬಹದ್ದೂರ್ ಸತೀಶ್, ಕಾಡಸೂರು ರಾಜಣ್ಣ, ಮಾದಾಪುರ ಗಿರೀಶ್, ಪುರ ವೃಷಭೇಂದ್ರ, ವಕೀಲರಾದ ಪ್ರಸನ್ನ, ಪ್ರಶಾಂತ್, ಅಭಿ ತೊಂಟದಾರ್ಯ.ಲೇಖನ್, ನರಸಿಂಹರಾಜು ಸೇರಿದಂತೆ ಮತ್ತಿತರರಿದ್ದಾರೆ.