ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : 2025-26 ನೇ ಸಾಲಿನಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕಿನ ರೈತರಿಗೆ ವಿವಿದ ರೀತಿಯ ಸಾಲ ಸೌಲಭ್ಯಗಳನ್ನು ವಿತರಿಸಲು 20 ಕೋಟಿ ಗುರಿ ಹೊಂದಲಾಗಿದೆ ಎಂದು ತಾಲ್ಲೂಕು ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷೆ ಪುಷ್ಪಲತಾರಮೇಶ್ ಹೇಳಿದರು.
ಕೆ.ಆರ್.ನಗರ : ಕೆ.ಅರ್.ನಗರ ಪಿ.ಎಲ್.ಡಿ.ಬ್ಯಾಂಕ್ ರೈತ ಸಮುದಾಯ ಭವನದಲ್ಲಿ ಪಿ.ಎಲ್.ಡಿ ಬ್ಯಾಂಕ್ ನ 2024-25 ನೇ ಸಾಲಿನ ಸರ್ವ ಸದಸ್ಯರ ಮಹಾ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸಕ್ತವಾಗಿ ಹೈನುಗಾರಿಕೆ, ಕುರಿ ಸಾಕಾಣಿಕೆ, ಭೂ ಅಭಿವೃದ್ಧಿ, ಸಣ್ಣ ನೀರಾವರಿ, ಟ್ರಾಕ್ಟರ್, ಪವರ್ ಟಿಲ್ಲರ್, ರೇಷ್ಮೆ, ಕೋಳಿ ಸಾಕಾಣಿಕೆ ಹಾಗೂ ತೋಟಗಾರಿಕೆ ಬೆಳೆಗಳಿಗೆ ಅಂದಾಜು 12 ಕೋಟಿಯಷ್ಟು ಸಾಲವನ್ನು ಕೊಡಲಾಗಿದೆ ಎಂದು ತಿಳಿಸಿದರು.
ಭೂ ಅಭಿವೃದ್ಧಿ ಬ್ಯಾಂಕ್ ನ ನೂತನ ಕಟ್ಟಡ ನಿರ್ಮಾಣಕ್ಕೆ ಅಂದಾಜು ವೆಚ್ಚ 54 ಲಕ್ಷ ಬಜೆಟ್ ಮಂಡಿಸಲಾಗಿದ್ದು ಇದರಲ್ಲಿ 37 ಲಕ್ಣ ಖರ್ಚು ಮಾಡಲಾಗಿದೆ, ಈಗಾಗಲೇ ಹೊಸ ಕಟ್ಟಡಕ್ಕೆ ಬ್ಯಾಂಕ್ ಕಚೇರಿಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದರು.
ಪಿಗ್ನಿ, ನಿಶ್ಚಿತ ಠೇವಣಿ ಮೇಲೆ ಸಾಲ ನೀಡಲು ಬ್ಯಾಂಕ್ ಆಡಳಿತ ಮಂಡಳಿ ನಿರ್ಧರಿಸಿದ್ದು, ಶೀಘ್ರದಲ್ಲೇ ಇ-ಸ್ಟಾಂಪಿಂಗ್ ಆರಂಭಿಸಲಾಗುತ್ತದೆ ಎಂದು ಅಧ್ಯಕ್ಷೆ ಪುಷ್ಪಲತಾರಮೇಶ್ ಮಾಹಿತಿ ನೀಡಿದರು.
ಪುಷ್ಪಲತಾ, ಉಪಾಧ್ಯಕ್ಷ ಪ್ರದೀಪ್ ಕುಮಾರ್ ಹೆಚ್.ಕೆ, ನಿರ್ಧೆಶಕರಾದ ಚಂದ್ರೇಗೌಡ ಕೆ.ಟಿ, ಎಂ.ಎಸ್. ಹರಿಚಿದಂಬರ್, ಚಂದ್ರಹಾಸ ಬಿ..ಎಸ್, ಕುಳ್ಳಬೋರೇಗೌಡ,
ರಾಹುಲ್ ಡಿ. ಆರ್, ಗಾಯತ್ರಮ್ಮ ಆರ್.ಎಂ, ಮಂಗಳ ಎ.ವಿ, ಮಹೇಶ ವಿ.ಆರ್, ಇಂದ್ರೇಶ್, ದೊಡ್ಡಯ್ಯ ರಮೇಶ, ಕಲಾವತಿ, ಬ್ಯಾಂಕ್ ವ್ಯವಸ್ಥಾಪಕ ಎನ್.ಆರ್.ನವೀನ್ ಕುಮಾರ್, ಗುಮಾಸ್ತೆ ಕೆ.ಪದ್ಮಜ, ಸಿಬ್ಬಂದಿಗಳಾದ ಡಿ.ಎಸ್.ಹಾಲಪ್ಪ, , ಬಿ.ಆರ್.ಉಷಾ, ಹೆಚ್.ಡಿ. ಶೃತಿ, ಮಂಜುನಾಥ್, ಮತ್ತಿತರರು ಹಾಜರಿದ್ದರು