ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಶಿಕ್ಷಕರ ದಿನಾಚರಣೆಯ ಹೊಸ್ತಿಲಿನಲ್ಲಿಯೇ ಕೆ.ಆರ್.ನಗರ ಕ್ಷೇತ್ರದ ಪ್ರಾಂಶುಪಾಲರೊಬ್ಬರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ಲಭ್ಯವಾಗಿದ್ದು ಶಿಕ್ಷಣ ಇಲಾಖೆಯಲ್ಲಿ ಸಂತಸ ಮನೆ ಮಾಡಿದೆ. ಕೆ.ಆರ್.ನಗರದ ಸರ್ಕಾರಿ ಪಿಯುಸಿ ಮಹಿಳಾ ಕಾಲೇಜಿನಲ್ಲಿ ಸುಮಾರು 5 ವರ್ಷಗಳಿಂದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಎಚ್.ಕೆ ಕೃಷ್ಣಯ್ಯ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ಲಭ್ಯವಾಗಿದೆ ಇವರಿಗೆ ಸಿಗುತ್ತಿರುವ ಪ್ರಶಸ್ತಿ ಕಾಲೇಜಿನ ಹಿರಿಮೆ ಹೆಚ್ಚಿಸುವಂತೆ ಮಾಡಿದೆ.
“ಮಂಡ್ಯ ಜಿಲ್ಲೆಯ ಕೃಷ್ಣಯ್ಯ ಅವರ ವಿಧ್ಯಾಭ್ಯಾಸ ” ಮೂಲತಃ ಮದ್ದೂರು ತಾಲೂಕಿನ ಹೊಸಕೆರೆ ಗ್ರಾಮದ ಕೆಂಡೆಗೌಡ ಮತ್ತು ಚಿಕ್ಕತಾಯಮ್ಮ ಅವರ ಪುತ್ರರಾಗಿರುವ ಇವರು 1ರಿಂದ 10 ತನಕ ಹೊಸಕೆರೆ ಮತ್ತು ಬೆಸಗರಹಳ್ಳಿಯಲ್ಲಿ ಪಿಯುಸಿಯನ್ನು ಮದ್ದೂರಿನ ಅರ್ಜುನ ಪುರಿ ಕಾಲೇಜಿನಲ್ಲಿ ಬಿ ಎಸ್ ಸಿ ಯನ್ನು ಮಂಡ್ಯದ ಇ.ಎಸ್ ಕಾಲೇಜ್ ನಲ್ಲಿ Msc ಅನ್ನು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಪಡೆದು ಕೊಂಡಿದ್ದಾರೆ.
” ವೃತ್ತಿ ಆರಂಭ “
ಎಚ್.ಕೆ. ಕೃಷ್ಣಯ್ಯ ಅವರು 26-7-1993ರಲ್ಲಿ ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು 98 ರಿಂದ 2004ರ ವರಿಗೆ ಮೈಸೂರಿನ ಮಹಾರಾಜ ಪಿಯು ಕಾಲೇಜು ನಂತರ 2004 ರಿಂದ 2018 ಎಸ್.ಕೆ.ಆರ್. ಬಾಲಕರ ಪದವಿ ಪೂರ್ವ ಕಾಲೇಜು ಕೆ ಆರ್ ನಗರದಲ್ಲಿ ಅನಂತರ ಪ್ರಾಚಾರ್ಯರಾಗಿ 2018 ರಿಂದ 2020 ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಲಿಗ್ರಾಮದಲ್ಲಿ 2020 ರಿಂದ ಇಲ್ಲಿಯ ತನಕ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕೆ.ಆರ್.ನಗರ ಇಲ್ಲಿ ಪ್ರಾಚಾರ್ಯ ರಾಗಿ ಸೇವೆಸಲ್ಲಿ ಸುತ್ತಿದ್ದಾರೆ.
ಪ್ರಶಸ್ತಿ ಆಯ್ಕೆ ಏಕೆ…?
ಕಾಲೇಜಿನಲ್ಲಿ ಉತ್ತಮ ಫಲಿತಾಂಶ, ಉತ್ತಮ ಮೂಲಭೂತ ಸೌಕರ್ಯ ಕಲ್ಪಿಸಿರುವುದು, ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಗಳು, ಆನ್ಲೈನ್ ಕ್ಲಾಸ್ ಗಳು ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸದಾ ಉತ್ತೇಜನ ನೀಡುವುದು, ಇಲಾಖೆ ನೀಡಿರುವ ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿರುವುದು, ಮಕ್ಕಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿರುವುದು, ಸಹೋದ್ಯೋಗಿಗಳ ಸಹಕಾರದಿಂದ ಉತ್ತಮ ಕಾಲೇಜಿನ ವಾತಾವರಣ ನಿರ್ಮಿಸಿ ವಿದ್ಯಾರ್ಥಿನಿಯರಿಗೆ ಪಾಠ ಪ್ರವಚನವನ್ನು ನಡೆಸುತ್ತಿರುವುದನ್ನು ಮನಗೊಂಡು ಇವರಿಗೆ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
” ಸಿ.ಎಂ. ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ವಿತರಣೆ”
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಯ ವತಿಯಿಂದ
ಭಾರತ ರತ್ನ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಜನ್ಮಾದಿನಾಚರಣೆಯ ಅಂಗವಾಗಿ.ಸೆ.5ರಂದು ಶಿಕ್ಷಕರ ದಿನಾಚರಣೆಯಲ್ಲಿ ಬೆಂಗಳೂರಿನ ಬ್ಯಾಂಕ್ವೆಟ್ ಸಭಾಂಗಣ ವಿಧಾನಸೌಧ ಇಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷ್ಣಯ್ಯ ಅವರಿಗೆ ಈ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಇವರಿಗೆ ಈ ಪ್ರಶಸ್ತಿ ಲಭ್ಯವಾಗಿರುವುದಕ್ಕೆ ಹುಣಸೂರು ಗ್ರೇಡ್ -2 ತಹಸೀಲ್ದಾರ್ .ಎಂ.ಎಸ್.ಯಧುಗಿರೀಶ್, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಹರಿಚಿದಂಬರ್, ಜಿಲ್ಲಾ ಅನುಧಾನಿತ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹೆಬ್ಬಾಳ್ ನಂದೀಶ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಲಕ್ಕಿಕುಪ್ಪೆ ಶಂಕರೇಗೌಡ, ಪುರಸಭಾ ಸದಸ್ಯ ಕೆ.ಎಲ್.ಜಗದೀಶ್ ಅಭಿನಂದಿಸಿದ್ದಾರೆ.
” ಪತಿಗೆ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ “
ತಮ್ಮ ಪತಿ ಎಚ್.ಕೆ.ಕೃಷ್ಣಯ್ಯ ಅವರ 24 ವರ್ಷದ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಮತ್ತು ಈಗ ಸೇವೆ ಸಲ್ಲಿಸುವ ಕಾಲೇಜಿನ ಶೈಕ್ಷಣಿಕ ಅಭಿವೃದ್ದಿಯನ್ನು ಮನಗೊಂಡ ರಾಜ್ಯ ಮಟ್ಟದ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ ಲಭ್ಯವಾಗಿರುವುದು ನನಗೆ ಹೆಚ್ಚಿನ ಸಂತಸ ತಂದಿದ್ದು ಈ ಪ್ರಶಸ್ತಿಯ ಮೂಲಕ ಪತಿ ಅವರಿಗೆ ಇನ್ನಷ್ಟು ಜವಬ್ದಾರಿ ಹೆಚ್ಚಿಸಿದೆ.
ಲೀಲಾವತಿ ಕೃಷ್ಣಯ್ಯ ಪತ್ನಿ