Wednesday, May 21, 2025
Google search engine

Homeಸ್ಥಳೀಯಶಾರದಾ ವಿಲಾಸ ಕಾಲೇಜಿನಲ್ಲಿ ಕಲಾ ಶಾರದಾ-೨೦೨೩ ಬಹುಮಾನ ವಿತರಣೆ

ಶಾರದಾ ವಿಲಾಸ ಕಾಲೇಜಿನಲ್ಲಿ ಕಲಾ ಶಾರದಾ-೨೦೨೩ ಬಹುಮಾನ ವಿತರಣೆ

ಮೈಸೂರು: ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಪದವಿಪೂರ್ವಕಾಲೇಜಿನ ವತಿಯಿಂದನಡೆದಕಲಾ ಶಾರದಾ-೨೦೨೩ ಅಂತರ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮದ ಬಹುಮಾನ ವಿತರಣಾ ಸಮಾರಂಭ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಇಂದು ಡಿ.೯ ನಡೆಯಿತು.
ಮುಖ್ಯ ಅತಿಥಿಗಳಾಗಿ ಕರ್ನಾಟಕರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ.ನಾಗೇಶ್ ವಿ ಬೆಟ್ಟಕೋಟೆ ಭಾಗವಹಿಸಿ ಮಾತನಾಡಿ ಸಾಂಸ್ಕೃತಿಕ ಸ್ಪರ್ಧೆಗಳು ವಿದ್ಯಾರ್ಥಿಜೀವನದ ಯಶಸ್ಸಿಗೆ ಮೈಲಿಗಲ್ಲು.ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳ್ಳಲುಪ್ರತಿಭಾ ವೇದಿಕೆಗಳು ಸಹಕಾರಿ.ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು ಬಹುಮಾನ ಪ್ರಶಸ್ತಿಗಳಲ್ಲ.

ವಿದ್ಯಾರ್ಥಿಯಾದವನು ಪಠ್ಯಪುಸ್ತಕದಜೊತೆಗೆ ಸಾಂಸ್ಕೃತಿಕಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ನಾಯಕತ್ವಗುಣ ಹಾಗೂ ಧೈರ್ಯ ಹೊರಬರಲು ಸಾಧ್ಯವಾಗಿತನ್ನ ಪ್ರತಿಭೆಯನ್ನು ಗಮನಿಸಿ ಹತ್ತಾರುಜನ ಪ್ರೊತ್ಸಾಹಿಸುತ್ತಾರೆ ಎಂದ ಅವರು ಸಂಸ್ಕೃತಿ ಮತ್ತು ಕಲೆಗಳನ್ನು ಮೈಗೂಡಿಸಿಕೊಂಡರೆ ಜೀವನ ಪರ್ಯಂತಕಲೆಗಾರನಾಗಿ ಉಳಿಯಲು ಸಾಧ್ಯ. ಭಾರತೀಯ ಸಂಸ್ಕೃತಿಯಲ್ಲಿರಾಮಾಯಣ, ಮಹಾಭಾರತಗಳು ಚಾರಿತ್ರಿಕ ಮಹತ್ವವನ್ನು ಪಡೆದುಕೊಂಡಿದೆ.ಇಲ್ಲಿ ಬರುವಆದರ್ಶ ವ್ಯಕ್ತಿಗಳ ಹಾಗೂ ಸರಳ ಜೀವನ ನಮಗೆಲ್ಲರಿಗೂಸ್ಪೂರ್ತಿ.ನಮ್ಮಲ್ಲಿಐಐಟಿ ಮಾಡಿರುವ ಶೇ.೭೬ ರಷ್ಟು ಪ್ರತಿಭಾವಂತರು ಹೊರದೇಶದಲ್ಲಿಇದ್ದಾರೆ.ಶೇ.೨೪ ರಷ್ಟು ಮಾತ್ರ ಭಾರತದಲ್ಲಿಯೇ ಉಳಿದು ದೇಶ ಸೇವೆ ಮಾಡುತ್ತಿದ್ದಾರೆ. ಆದ್ದರಿಂದ ಎಲ್ಲರೂ ಇಲ್ಲೇ ಉಳಿದು ದೇಶಕ್ಕಾಗಿದುಡಿದರೆದೇಶ ಮತ್ತಷ್ಟು ಮುಂದುವರಿಯಲು ಸಾಧ್ಯವಾಗುತ್ತದೆ ಎಂದರು.

ವಿಶೇಷ ಆಹ್ವಾನಿತರಾಗಿಗೌರವ ಕಾರ್ಯದರ್ಶಿಗಳಾದ ಎನ್.ಚಂದ್ರಶೇಖರ್‌ರವರು ಮಾತನಾಡಿವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಕಲಾ ಶಾರದಾಒಂದು ವಿಶೇಷವಾದ ವೇದಿಕೆ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಸಿ.ಕೆ.ಅಶೋಕ್ ಕುಮಾರ್‌ವಹಿಸಿ ಮಾತನಾಡಿ ವಿದ್ಯೆ ಮತ್ತು ವಿವೇಕಕ್ಕೆ ಪ್ರಥಮ ಸ್ಥಾನವನ್ನು ನಮ್ಮಸಂಸ್ಥೆ ನೀಡುತ್ತಾ ಬಂದಿದೆ.ಪಾಶ್ಚಿಮಾತ್ಯ ಸಂಸ್ಕೃತಿ ಬಿಟ್ಟು ಭಾರತೀಯ ಸಂಸ್ಕೃತಿಯನ್ನು ಹೆಚ್ಚು ಬಳಸಿ ಉಳಿಸಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಕಲಾ ಶಾರದಾ ಸಂಚಾಲಕರಾದರಾಜೇಂದ್ರ ಪ್ರಸಾದ್ ಹೊನ್ನಲಗೆರೆ, ಕಾಲೇಜಿನ ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ವಿದೂಷಿ ಕಾವ್ಯಶ್ರೀ ಆರ್‌ರಾವ್, ಉಪನ್ಯಾಸಕರಾದ ಹೆಚ್.ಆರ್.ಪರಮೇಶ್, ಎ.ಶಿಲ್ಪಾ, ಡಾ.ಪೂಜಾ, ಡಾ.ಲಾವಣ್ಯ, ಶ್ರೀಮತಿ ವಿಂದ್ಯಾಆರ್ ಪ್ರಸಾದ್, ಮಧುರ, ಮನೋಜ್‌ಕುಮಾರ್, ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಮೈಸೂರು ನಗರ ಮಟ್ಟದಅಂತರಕಾಲೇಜುಸಾಂಸ್ಕೃತಿಕ ಸ್ಪರ್ಧೆಗೆ೨೭ ಕಾಲೇಜುಗಳು ಭಾಗವಹಿಸಿದ್ದವು. ಇದರಲ್ಲಿ ಭರತನಾಟ್ಯ, ಸಮೂಹ ನೃತ್ಯ, ಚಿತ್ರಗೀತೆ, ಭಾವಗೀತೆ, ಜನಪದಗೀತೆ, ಶಾಸ್ತ್ರೀಯ ಸಂಗೀತಸ್ಪರ್ಧೆಗಳು ನಡೆದವು.ಈ ಸ್ಪರ್ಧೆಗಳಲ್ಲಿಅತೀ ಹೆಚ್ಚು ಅಂಕ ಹಾಗೂ ಬಹುಮಾನವನ್ನು ಪಡೆದ ಸದ್ವಿದ್ಯಾ ಸೆಮಿ ರೆಸಿಡೆನ್ಸಿ ಪದವಿ ಪೂರ್ವಕಾಲೇಜಿಗೆ ಶ್ರೀಮತಿ ಶಾರದಮ್ಮ ಕಲಾ ಶಾರದಾ ಪರ್‍ಯಾಯ ಪಾರಿತೋಷಕ ಲಭಿಸಿತು.ಕಾರ್ಯಕ್ರಮಕ್ಕೆ ವಿದೂಷಿ ಕಾವ್ಯಶ್ರೀ ಆರ್‌ರಾವ್ ಪ್ರಾರ್ಥನೆ ಸಲ್ಲಿಸಿದರೆ, ಕಲಾ ಶಾರದಾ ಸಂಚಾಲಕ ರಾಜೇಂದ್ರ ಪ್ರಸಾದ್ ಹೊನ್ನಲಗೆರೆ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು, ಆಂಗ್ಲ ಭಾಷಾ ಉಪನ್ಯಾಸಕ ಮನೋಜ್‌ಕುಮಾರ್ ನಿರೂಪಿಸಿದರು.

RELATED ARTICLES
- Advertisment -
Google search engine

Most Popular