Friday, April 3, 2026
Google search engine

Homeರಾಜಕೀಯಕೇರಳದಲ್ಲಿ ಗ್ಯಾರಂಟಿ ರಾಜಕೀಯಕ : ಯುಡಿಎಫ್‌ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಗಳ ಘೋಷಣೆ

ಕೇರಳದಲ್ಲಿ ಗ್ಯಾರಂಟಿ ರಾಜಕೀಯಕ : ಯುಡಿಎಫ್‌ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಗಳ ಘೋಷಣೆ

ಕೊಚ್ಚಿ : ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ, ಇಂದಿರಾ ಕ್ಯಾಂಟೀನ್‌ ವಿಸ್ತರಣೆ, ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳದಂಥ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಫಲ ಕೊಟ್ಟ ಗ್ಯಾರಂಟಿ ಯೋಜನೆಗಳನ್ನು ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲೂ ಜಾರಿಗೊಳಿಸಲು ಕಾಂಗ್ರೆಸ್‌ ನೇತೃತ್ವದ ಯುನೈಟೆಡ್‌ ಡೆಮಾಕ್ರೆಟಿಕ್‌ ಫ್ರಂಟ್‌ (ಯುಡಿಎಫ್‌) ಮುಂದಾಗಿದೆ.

ಏ.9ರಂದು ನಡೆಯಲಿರುವ ಚುನಾವಣೆಗೆ ಪಕ್ಷದ ಹಿರಿಯ ನಾಯಕ ವಿ.ಡಿ.ಸತೀಶನ್‌ ಮತ್ತು ಇತರರು ಗುರುವಾರ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ವಿವಿಧ ವರ್ಗದವರಿಗೆ ನೀಡುವ ಪಿಂಚಣಿ ಮೊತ್ತ 2000 ರೂ.ನಿಂದ 3000 ರೂ.ಗೆ ಏರಿಕೆ, ಕಾಲೇಜು ವಿದ್ಯಾರ್ಥಿನಿಯರಿಗೆ 1 ಸಾವಿರ ರ. ಮಾಸಿಕ ಆರ್ಥಿಕ ನೆರವು, ರಾಜ್ಯದ ಪ್ರತಿ ಕುಟುಂಬಗಳಿಗೂ 25 ಲಕ್ಷ ರು. ಮೌಲ್ಯದ ಆರೋಗ್ಯ ವಿಮೆ, ಸಣ್ಣ ಉದ್ಯಮಗಳಿಗೆ 5 ಲಕ್ಷ ರು. ಬಡ್ಡಿರಹಿತ ಸಾಲ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ, ಹಸಿವು ಮುಕ್ತ ಕೇರಳಕ್ಕಾಗಿ ರಾಜ್ಯದೆಲ್ಲೆಡೆ ಇಂದಿರಾ ಕ್ಯಾಂಟಿನ್‌ ವಿಸ್ತರಣೆ, ಶಿಕ್ಷಣ ಸಂಸ್ಥೆಗಳಲ್ಲಿ ರ್‍ಯಾಗಿಂಗ್‌ ತಡೆಯಲು ಪ್ರತ್ಯೇಕ ಆ್ಯಪ್‌ ಬಿಡುಗಡೆ ಸೇರಿದಂತೆ ಹಲವು ಯೋಜನೆಗಳನ್ನು ಪ್ರಕಟಿಸಲಾಗಿದೆ.

ಇನ್ನೂ ಭರವಸೆಗಳೇನು ಎಂಬುದನ್ನು ನೋಡುವುದಾದರೇ

  • ಕರ್ನಾಟಕದ ಶಕ್ತಿ ಮಾದರಿಯಲ್ಲಿ ಕೇರಳದ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ
  • ವಿವಿಧ ವರ್ಗದವರಿಗೆ ನೀಡಲಾಗುವ ಮಾಸಿಕ ಪಿಂಚಣಿ ಮೊತ್ತ 2000 ರು.ನಿಂದ 3000 ರು.ಗೇರಿಕೆ
  • ಕಾಲೇಜು ವಿದ್ಯಾರ್ಥಿನಿಯರಿಗೆ ₹1 ಸಾವಿರ. ಪ್ರತಿ ಕುಟುಂಬಕ್ಕೂ 25 ಲಕ್ಷ ರು. ಆರೋಗ್ಯ ವಿಮೆ
  • ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ. ಸಣ್ಣ ಉದ್ದಿಮೆಗಳಿಗೆ ಬಡ್ಡಿರಹಿತ ಸಾಲ
  • ರಾಜ್ಯದೆಲ್ಲೆಡೆ ಇಂದಿರಾ ಕ್ಯಾಂಟೀನ್‌ ವಿಸ್ತರಣೆ. ಶಿಕ್ಷಣ ಸಂಸ್ಥೆಗಳಲ್ಲಿ ರ್‍ಯಾಗಿಂಗ್‌ ತಡೆಗೆ ಪ್ರತ್ಯೇಕ ಆ್ಯಪ್‌
  • ಕೃಷಿಗೆ ಪ್ರತ್ಯೇಕ ಬಜೆಟ್‌, – ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ಪ್ರತ್ಯೇಕ ಸರ್ಕಾರಿ ಇಲಾಖೆ ಸ್ಥಾಪನೆ
RELATED ARTICLES
- Advertisment -
Google search engine

Most Popular