Monday, November 3, 2025
Google search engine

Homeರಾಜ್ಯಸುದ್ದಿಜಾಲಖರ್ಗೆ ರಾಜ್ಯದ ಸಿಎಂ ಆಗ್ತಾರೆ: ಯತ್ನಾಳ ಸ್ಪೋಟಕ‌ ಭವಿಷ್ಯ.

ಖರ್ಗೆ ರಾಜ್ಯದ ಸಿಎಂ ಆಗ್ತಾರೆ: ಯತ್ನಾಳ ಸ್ಪೋಟಕ‌ ಭವಿಷ್ಯ.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿ
ವಿಜಯಪುರದ ಬಬಲೇಶ್ವರ ಕ್ಷೇತ್ರದಲ್ಲಿ ಸಮಾವೇಶ ಮಾಡುತ್ತೇವೆ ಎಂದು ಸಚಿವ ಎಂ.ಬಿ.ಪಾಟೀಲ್ ಸವಲಾ್ ಸ್ವೀಕಾರ ಮಾಡಿದ್ದೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇವೆ. ಬಸವಣ್ಣನವರ ಹೆಸರು ಹೇಳಿ ನಾಟಕ ಮಾಡಬೇಡಿ. ಬಸವಣ್ಣನವರ ಹೆಸರು ಹೇಳಿ ಪಾದಪೂಜೆ ಮಾಡಿಸಿಕೊಳ್ಳವಾರದು. ಕಾವಿ ಬದಲಾಗಿ ಹಸಿರು ಬಟ್ಟೆ ಧರಸಿ ಎಂದು ಶ್ರೀಗಳಿಗೆ ಟೀಕೆ ಮಾಡಿದರು.
ಲಿಂಗಾಯತ ಧರ್ಮ ಸ್ಥಾಪನೆಯ ಬಗ್ಗೆ ದಾಖಲೆ ಎಲ್ಲಿದೆ. ಹಿಂದು ಸಮಾಜದಲ್ಲಿ ಇರೋ ಮೂಢ ನಂಬಿಕೆ ವಿರುದ್ಧ ಹೋರಾಟ ಮಾಡಿದರು. ಬಸವಣ್ಣನವರ ಜೊತೆಗೆ ಎಲ್ಲಾ ಸಮಾಜದರು ಇದ್ದರು. ಎಂ ಬಿ ಪಾಟೀಲ್ ನಾನು ಓರಿಜಲ್ ಗೌಡ್ರ ನಡುವೆ ತಿಂಡಿ ಬದಿದೆ. ನಿಮ್ಮ ಭೀಮ, ಬಸವ ಆರ್ಮಿ ಬರಲಿ ನಿಮ್ಮ ಭಾಷೆಯಲ್ಲಿಯೇ ನಾವು ಉತ್ತರ ಕೊಡುತ್ತೇವೆ ಎಂದು ಸವಾಲ್ ಹಾಕಿದರು.
ವಿಜಯಪುರದಿಂದ ಜನರನ್ನು ಕರೆದುಕೊಂಡು ಹೋಗಿ ಬೆಂಗಳೂರಿನಲ್ಲಿ ಸಮಾವೇಶ ಮಾಡಿದರು. ಸತೀಶ್ ಜಾರಕಿಹೊಳಿಯನ್ನು ಸಿಎಂ ಮಾಡೋ ಭಯ ಸಿಎಂಗೆ ಇದೆ‌. ಹೀಗಾಗಿ ಎಂ ಬಿ ಪಾಟೀಲ್ ರನ್ನು ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ ಎಂದರು‌.
ನವೆಂಬರ್ ನಲ್ಲಿ ರಾಜ್ಯದಲ್ಲಿ ಕಾಂತ್ರಿ ಆಗಲಿದೆ. ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ‌ ಎಂದರು.
ಡಿಕೆಶಿಯನ್ನ ಸಿಎಂ ಮಾಡ್ತಿನಿ ಅಂತ ನೀವು ಡಿಸೈಡ್ ಮಾಡಿದರ ನಾನು ಸತೀಶ್ ಪರವಾಗಿ ನಿಲ್ತಿನಿ ಅಂತ ಸಿದ್ದರಾಮಯ್ಯ ಸಂದೇಶ ಕೊಟ್ಟಿದ್ದಾರೆ.ತಮ್ಮ ಮಗನನ್ನು ಕಳಿಸಿ ಸಂದೇಶ ಸಾರಿದ್ದಾರೆ.
ಸಿಎಂ ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದರು.
ನರೇಂದ್ರ ಮೋದಿ ಜನರಿಂದ ಆದ ನಾಯಕ. ದೇಶದಲ್ಲಿ ಒಂದು ಸಂಚಲನ ಆಯ್ತು. ಮೋದಿಯವರ ನಂತರ ಯೋಗಿ ಆದಿತ್ಯನಾಥ ಪಿಎಂ ಆಗಬೇಕು ಎಂದು ಜನ ಬಯಸಿದ್ದಾರೆ. ಹಾಗೆಯೇ ರಾಜ್ಯದ ಜನರ ಆಶಾವಾದವಿದೆ. ಜನರಲ್ಲಿ ಯತ್ನಾಳ ಸಿಎಂ ಆಗಬೇಕು ಎನ್ನುವುದಿದೆ. ಇಲ್ಲಾವಾದರೆ ನಂದು ಜೆಸಿಬಿ ಪಾರ್ಟಿ ರೆಡಿ ಇದೆ ಎಂದರು‌.
ಮುಂದಿನ ಚುನಾವಣೆವಣೆಯೊಳಗೆ ಹೈಕಮಾಂಡ್ ಕರೆಯಲಿ.
ಕರೆಯದಿದ್ದರೆ ನಂದು ಜೆಸಿಪಿ ಪಾರ್ಟಿ ರೆಡಿ ಇದೆ. ಜೆಡಿಎಸ್, ಸಿ ಅಂದ್ರೆ ಕಾಂಗ್ರೇಸ್ ಬಿ ಅಂದ್ರೆ ಬಿಜೆಪಿ.ಎಲ್ಲ ಕಡೆಯಿಂದ ನಾನು ಜನರನ್ನು ಕರೆದು ಪಾರ್ಟಿ ‌ಕಟ್ಟುತ್ತೆನೆ. ಎಲ್ಲ ಪಕ್ಷದಲ್ಲೂ ಅತೃಪ್ತರು ಇದ್ದಾರೆ. ಅವರನ್ನು ಕರೆದುಕೊಂಡು ನಾನು ಪಕ್ಷ ಕಟ್ಟುತ್ತೆನೆ ಎಂದರು.
ನಾಯಯಕತ್ವ ಬದಲಾವಣೆ ವಿಚಾರದಲ್ಲಿ ಶಾಸಕ ಬಸವಗೌಡ ಪಾಟೀಲ ಯತ್ನಾಳ ಸ್ಪೋಟಕ ಹೇಳಿಕೆ ನೀಡಿದರು.ನವೆಂಬರ್ ಕ್ರಾಂತಿ, ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯೆ. ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸ್ಪರ್ಧೆಯಲ್ಲಿರುವ ಯಾವ ನಾಯಕರೂ ಸಿಎಂ ಆಗಲ್ಲ ಎಂದ ಯತ್ನಾಳ. ರಾಜ್ಯದ ಸಾರಥ್ಯ ಬ್ಲ್ಯಾಕ್ ಹಾರ್ಸ್‌ ಕೈಗೆ ಸಿಗಲಿದೆ ಎಂದು ಭವಿಷ್ಯ ನುಡಿದ ಯತ್ನಾಳ. ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ.
ಡಿಕೆಶಿಯೂ ಸಿಎಂ ಆಗಲ್ಲ, ಸತೀಶ್ ಜಾರಕಿಹೊಳಿ‌ ಕೂಡ ಸಿಎಂ ಆಗಲ್ಲ. ಒಮ್ಮೆ ಸಿಎಂ ಆಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಕಾಯುತ್ತಿದ್ದಾರೆ. ಸಿಎಂ ಪುತ್ರ ಕೂಡ ಬೆಳಗಾವಿಗೆ ಬಂದು ಸತೀಶ್ ಜಾರಕಿಹೊಳಿ‌ ಹೆಸರು ಹೇಳಿ ಹೋಗಿದ್ದಾರೆ ಎಂದರು.
ಆದರೆ ನಾಯಕತ್ವ ಬದಲಾವಣೆ ಆಗಲಿದೆ, ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ ಎಂದರು.

RELATED ARTICLES
- Advertisment -
Google search engine

Most Popular