Sunday, July 20, 2025
Google search engine

Homeರಾಜ್ಯಸುದ್ದಿಜಾಲ"ಖರ್ಗೆ ಅವರ ಆಪ್ತ ಡ್ರಗ್ಸ್ ಪ್ರಕರಣದಲ್ಲಿ ಬಂಧನ: ಪ್ರಿಯಾಂಕ್ ಖರ್ಗೆ ಒತ್ತಡದಿಂದ ಪೊಲೀಸರು ಮೌನವಹಿಸಿದರಾ?" –...

“ಖರ್ಗೆ ಅವರ ಆಪ್ತ ಡ್ರಗ್ಸ್ ಪ್ರಕರಣದಲ್ಲಿ ಬಂಧನ: ಪ್ರಿಯಾಂಕ್ ಖರ್ಗೆ ಒತ್ತಡದಿಂದ ಪೊಲೀಸರು ಮೌನವಹಿಸಿದರಾ?” – ಭರತ್ ಶೆಟ್ಟಿ ಪ್ರಶ್ನೆ

ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ಗುಲ್ಬರ್ಗ ದಕ್ಷಿಣ ಬ್ಲಾಕ್‌ನ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗರಾಜ ಕಣ್ಣಿಯವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಇದರಿಂದ ಮುಂಚೆ ಲಿಂಗರಾಜ ಕಣ್ಣಿ ಅವರ ತಂಡದಿಂದ ಇರಬಹುದು, ಅವರ ಒಟ್ಟಿಗೆ ಇದ್ದಂತಹ ಡ್ರಗ್ಸ್ ವ್ಯಾಪಾರ ಮಾಡುವಂತಹ ವ್ಯಕ್ತಿಗಳು ಒಂದು ವರ್ಷದಿಂದ ಇದನ್ನ ಮಾಡ್ತಾ ಇದ್ದಾರೆ. ಆದ್ರೆ ಕರ್ನಾಟಕ ಪೊಲೀಸರು ಯಾರ ಒತ್ತಡದಿಂದಾಗಿ ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಅನ್ನೋದು ನಮ್ಮ ಪ್ರಶ್ನೆ ಎಂದು ಬಿಜೆಪಿ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ. ಅವರು ಇಂದು ಮಂಗಳೂರಲ್ಲಿ ಮಾಧ್ಯಮದವ್ರ ಜೊತೆಗೆ ಮಾತನಾಡುತ್ತಿದ್ದರು.

ಪ್ರಿಯಾಂಕ್ ಖರ್ಗೆ ಅವರ ಆಪ್ತರಾದ ಈ ವ್ಯಕ್ತಿ ಪ್ರಿಯಾಂಕ್ ಖರ್ಗೆ ಅವರ ಒತ್ತಡದಿಂದ ಪೊಲೀಸರು ಬಾಯಿ ಮುಚ್ಚಿ ಕೂತಿದ್ದೀರಾ? ಎಂದು ಪ್ರಶ್ನೆ ಮಾಡಿದ ಅವ್ರು, ಗುಲ್ಬರ್ಗದಲ್ಲಿ ಈ ಹಿಂದೆ ಎರಡು ತಿಂಗಳ ಹಿಂದೆ ಒಂದು ಡ್ರಗ್ಸ್ ಕನ್ಸಲ್ಟೆಂಟ್ಸ್ ಸೀಜ್ ಮಾಡಿದರು. ಪೊಲೀಸರು ಸೀಜ್ ಮಾಡಿದ ನಂತರ ಅದರ ಇನ್ವೆಸ್ಟಿಗೇಷನ್ನು ಮುಂದುವರೆದು ಯಾಕೆ ಯಾರ ಮೇಲೂ ಕ್ರಮ ಆಗಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಯಾರ ಒತ್ತಡ ಇದೆ? ಪೊಲಿಟಿಕಲ್ ಪ್ರಭಾವ ಇದ್ಯಾ ಇದರಲ್ಲಿ? ರೂಲಿಂಗ್ ಪಾರ್ಟಿಯ ಸಚಿವರ ಪಾತ್ರ ಇದರಲ್ಲಿ ಇದ್ಯಾ ಅನ್ನೋದು ನಮ್ಮ ಪ್ರಶ್ನೆ ಎಂದರು. ಕೂತಾಗ, ನಿಂತಾಗ ಬೆಳಗ್ಗೆ ಎದ್ದ ಕೂಡಲೇ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ನ ಬಂದ್ ಮಾಡುತ್ತೇವೆ. ಆರ್ ಎಸ್ ಎಸ್ ಸರಿ ಇಲ್ಲ. ಬಿಜೆಪಿಗರು ಯಾರು ಸರಿ ಇಲ್ಲ ಎನ್ನುವಂತಹ ಮಾತನ್ನು ಹೇಳುತ್ತಿರುತ್ತಾರೆ. ಅವರಿಗೆ ಸರ್ವಜ್ಞ ಸಿಂಡ್ರೋಮ್ ಅನ್ನುವಂತದ್ದು ಇದೆ. ಅವರಿಗೆ ನನಗೆ ಮಾತ್ರ ಎಲ್ಲಾ ಗೊತ್ತಿರೋದು ಎಂಬ ಭಾವನೆ ಇದೆ. ನಾನೇ ಸರ್ವಜ್ಞ ಅಂತ ಮನಸ್ಥಿತಿಯಿಂದ ಮಾತಾಡ್ತಾರೆ. ಬೆಳಗ್ಗೆ ಎದ್ದ ಕೂಡಲೇ ಸಂಘಪರಿವಾರ, ಆರೆಸ್ಸೆಸ್ ಸರಿ ಇಲ್ಲ. ಬಂದ್ ಮಾಡ್ತೀನಿ ಅಂತ ಮಾತಾಡ್ತಾರೆ ಎಂದ ಅವರು ಭಾರತೀಯ ಜನತಾ ಪಾರ್ಟಿಯು ಮೊದಲಿನಿಣ್ದಲೂ ಡ್ರಗ್ಸ್ ನ ವಿರುದ್ಧ ಯುದ್ಧವನ್ನು ಸಾರಿಕೊಂಡು ಬಂದಿದೆ ಅಂದ್ರು. ಪ್ರಿಯಾಂಕ್ ಖರ್ಗೆ ಆಪ್ತರು ಇದರಲ್ಲಿ ಭಾಗಿಯಾಗಿದ್ದಾರೆ. ಆದ್ರೆ ಪ್ರಿಯಾಂಕ್ ಖರ್ಗೆ ಅವರು ಇದರ ಬಗ್ಗೆ ಒಂದೇ ಒಂದು ಟ್ವೀಟ್ ಆಗಲಿ, ಹೇಳಿಕೆ ಕೂಡಾ ನೀಡ್ತಿಲ್ಲ ಎಂದು ಆರೋಪಿಸಿದರು.

RELATED ARTICLES
- Advertisment -
Google search engine

Most Popular