Thursday, September 4, 2025
Google search engine

Homeಅಪರಾಧಕೊಡಗು: ₹18 ಲಕ್ಷ ಮೌಲ್ಯದ 70 ಕ್ವಿಂಟಲ್ ಕಾಫಿ ಕಳವು : ಐವರು ಆರೋಪಿಗಳು ಬಂಧನ

ಕೊಡಗು: ₹18 ಲಕ್ಷ ಮೌಲ್ಯದ 70 ಕ್ವಿಂಟಲ್ ಕಾಫಿ ಕಳವು : ಐವರು ಆರೋಪಿಗಳು ಬಂಧನ

ಕೊಡಗು : ಸುಮಾರು 18 ಲಕ್ಷ ಮೌಲ್ಯದ 70 ಕ್ವಿಂಟಲ್ ಕಾಫಿ ಕಳ್ಳತನ ಮಾಡಿದ ಐವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಈ ಒಂದು ಘಟನೆ ನಡೆದಿದ್ದು, ಬಂಧಿತರನ್ನು ಸುನಿಲ್, ರಾಜು, ಶರತ್, ದಿನೇಶ್ ಹಾಗು ಜಿತೇಂದ್ರ ಎಂದು ತಿಳಿದು ಬಂದಿದೆ.

ಆರೋಪಿಗಳು ಸುಮಾರು 18 ಲಕ್ಷ ಮೌಲ್ಯದ ಕಾಫಿ ಕಳ್ಳತನ ಮಾಡಿದ್ದರು. ಕುಶಾಲನಗರ ತಾಲೂಕಿನ ಕಡ್ಲೂರಿನಲ್ಲಿ ಈ ಒಂದು ಘಟನೆ ನಡೆದಿತ್ತು. ಕೊಡಗು ಜಿಲ್ಲೆಯ ಕುಶಲನಗರ ತಾಲೂಕಿನ ಕಡ್ಲೂರು ಗ್ರಾಮದಲ್ಲಿ ಉಮಾ ಕಾಫಿ ವರ್ಕ್ಸ್ ನಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದಾರೆ. ಬಂಧಿತರಿಂದ 6,095 ಕೆಜಿ ಕಾಫಿ ಹಾಗೂ ಮೂರು ವಾಹನ ವಶಕ್ಕೆ ಪಡೆಯಲಾಗಿದೆ ಈ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular