ನಾಗಮಂಗಲ: ಬೆಳ್ಳೂರು ೧೮೧೮ ರ ಜನವರಿ ೧ ರಂದು ಪೇಶ್ವೆಯರ ವಿರುದ್ಧ ಸಿದ್ಧನಾಕ ನಾಯಕತ್ವದಲ್ಲಿ ೫೦೦ ಮಹರ್ ಸೈನಿಕರು ಪೇಶ್ವೆ ಬಾಜಿರಾವ್ ನ ೨೮೦೦೦ ಸೈನಿಕರನ್ನು ಸೋಲಿಸಿದ ವಿಜಯೋತ್ಸವದ ದಿನದ ಅಸ್ಪೃಶ್ಯತೆ ಮೊದಲ ಸಂಗ್ರಾಮ ಕೋರೆಗಾಂವ್ ಆಚರಣೆಯನ್ನು ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ದಲಿತ ಮುಖಂಡರ ಆಚರಿಸಿದರು.
ನೂರಾರು ದ್ವಿಚಕ್ರ ವಾಹನಗಳ ಮೂಲಕ ಜೈ ಭೀಮ್ ಹಾಗೂ ಕೋರೆಗಾಂವ್ ಸಂಗ್ರಾಮ ಎಂಬ ಘೋಷಣೆಯೊಂದಿಗೆ ಬೆಳ್ಳೂರ್ ಕ್ರಾಸ್ ಮೂಲಕ ಬೆಳ್ಳೂರು ಪಟ್ಟಣದ ಅಂಬೇಡ್ಕರ್ ವೃತ್ತದ ವರೆಗೆ ಬೃಹತ್ ಬೈಕ್ ಮೆರವಣಿಗೆ ನಡೆಸಿ ವಿಜಯೋತ್ಸವದ ಕಾರ್ಯಕ್ರಮ ಆಚರಣೆ ಮಾಡಿದರು. ಗಣ್ಯರೊಂದಿಗೆ ಡಾ.ಬಿ.ಆರ್. ಅಂಬೇಡ್ಕರ್ ಪುತ್ತಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಳ್ಳೂರಿನ ದಲಿತ ಮುಖಂಡ ಆಟೋ ಶಿವಣ್ಣ ಮಾತನಾಡಿ ನಾವೆಲ್ಲರೂ ಕೂಡ ಪ್ರಸ್ತುತ ದಿನದಲ್ಲಿ ಸಮಾನತೆಯಿಂದ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಮೂಲ ಕಾರಣ ಅಂಬೇಡ್ಕರ್ ಕೊಟ್ಟಂತಹ ಸಿದ್ಧಾಂತಗಳು ಹಾಗೂ ಸಿದ್ದನಾಕ ಹೋರಾಟದ ವಿಜಯೋತ್ಸವದ ದಿನ ನಾವೆಲ್ಲರೂ ನೆನೆಯಲೇಬೇಕು ಎಂದರು.
ದಲಿತ ಮುಖಂಡ ಕ್ಯಾತನಹಳ್ಳಿ ಮಂಜುನಾಥ ಮಾತನಾಡಿ ೨೮೦೦೦ ಪೇಶ್ವೆ ಬಾಜಿರಾವ್ ನ ಸೈನಿಕರನ್ನು ಕೇವಲ ೫೦೦ ಜನ ಮೆಹರ್ ಸೈನಿಕರು ಹೊಡೆದು ಉರುಳಿಸಿದ್ದು ಹೆಮ್ಮೆಯ ವಿಚಾರವೆಂದರು ಮತ್ತೊಬ್ಬ ಮುಖಂಡ ಕಂಚಿನ ಕೋಟೆ ಮೂರ್ತಿ ಮಾತನಾಡಿ ಕೋರೆಗಾಂವ್ ಯುದ್ಧದ ಚರಿತ್ರೆಯನ್ನು ಕಾರ್ಯಕ್ರಮದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಕಂಚಿನ ಕೋಟೆ ಮೂರ್ತಿ, ಕ್ಯಾತನಹಳ್ಳಿ ಮಂಜುನಾಥ, ರಂಗೇಗೌಡ, ಆಟೋ ಶಿವಣ್ಣ, ಲೋಹಿತ್, ಶೀವು, ಸುರೇಶ್, ಮನು, ಕೆಂಪಣ್ಣ, ವೆಂಕಟೇಶ್,ಪುಟ್ಟರಾಜು, ನೂರಾರು ದಲಿತ ಮುಖಂಡರು ಭಾಗವಹಿಸಿದ್ದರು