Sunday, July 13, 2025
Google search engine

Homeಸಿನಿಮಾಕನ್ನಡ ಸೇರಿದಂತೆ 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಕೋಟ ಶ್ರೀನಿವಾಸ ರಾವ್ ನಿಧನ

ಕನ್ನಡ ಸೇರಿದಂತೆ 750ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಕೋಟ ಶ್ರೀನಿವಾಸ ರಾವ್ ನಿಧನ

ಹಿರಿಯ ಬಹುಭಾಷಾ ನಟ ಕೋಟ ಶ್ರೀನಿವಾಸ ರಾವ್ (83) ಇಂದು ಬೆಳಗಿನ ಜಾವ ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ನಿಧನರಾದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ತಮ್ಮ ಮಗನನ್ನು ಕಳೆದುಕೊಂಡ ಬಳಿಕ ಗಂಭೀರ ಮಾನಸಿಕ ಖಿನ್ನತೆಯಲ್ಲಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಕೋಟ ರಾವ್ 750ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳನಾಯಕ, ಪೋಷಕ ಪಾತ್ರ ಹಾಗೂ ಹಾಸ್ಯನಟನಾಗಿ ಗಮನ ಸೆಳೆದಿದ್ದರು. ಅವರು ತೆಲುಗು, ತಮಿಳು, ಕನ್ನಡ ಚಿತ್ರರಂಗಗಳಲ್ಲಿ ಬಹುಮಾನ್ಯ ನಟರಾಗಿದ್ದರು. ವಿಶೇಷವಾಗಿ ನಟ ಮೋಹನ್ ಬಾಬು ಅವರ ಜೊತೆಗೆ ಸುಮಾರು 60 ಸಿನಿಮಾಗಳಲ್ಲಿ ನಟಿಸಿದ್ದು, ಇಬ್ಬರ ಜೋಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು.

1942 ರ ಜುಲೈ 10ರಂದು ಆಂಧ್ರಪ್ರದೇಶದ ಕಂಕಿಪಾಡು ಗ್ರಾಮದಲ್ಲಿ ಜನಿಸಿದ ಅವರು, ಚಲನಚಿತ್ರರಂಗ ಪ್ರವೇಶಕ್ಕೂ ಮೊದಲು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಜೊತೆಗೆ 20 ವರ್ಷಗಳಷ್ಟು ರಂಗಭೂಮಿಯಲ್ಲಿ ನಟಿಸಿ ವಿಶಿಷ್ಟ ಅನುಭವ ಗಳಿಸಿದ್ದರು. ಅವರ ವಿಶಿಷ್ಟ ನಟನಾ ಶೈಲಿ, ಹಾಸ್ಯಶಕ್ತಿ, ಮತ್ತು ನಿರ್ವಹಣೆಯಿಂದ ಚಿತ್ರರಂಗದಲ್ಲಿ ಅಪಾರ ಸ್ಥಾನ ಗಳಿಸಿದ್ದರು.

RELATED ARTICLES
- Advertisment -
Google search engine

Most Popular