Wednesday, May 21, 2025
Google search engine

Homeಸ್ಥಳೀಯಕೆ.ಆರ್.ನಗರ: ಗ್ರಾಪಂ ವ್ಯಾಪ್ತಿಗೆ ಸೇರಿದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ ತೆರವು

ಕೆ.ಆರ್.ನಗರ: ಗ್ರಾಪಂ ವ್ಯಾಪ್ತಿಗೆ ಸೇರಿದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ ತೆರವು

ಕೆ.ಆರ್.ನಗರ: ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ನ್ಯಾಯಾಲಯ ಆದೇಶ ಅನ್ವಯ ಗ್ರಾಪಂ ವ್ಯಾಪ್ತಿಗೆ ಸೇರಿದ ಜಾಗದಲ್ಲಿ ಅನಧಿಕೃತವಾಗಿ ಶೆಡ್ ನಿರ್ಮಾಣ ತೆರವು ಮಾಡಲಾಗಿದೆ ಎಂದು ಪಿಡಿಒ ಕೆ ಎ ಮಂಜುನಾಥ್ ತಿಳಿಸಿದರು.

ಅವರು ಗ್ರಾಪಂ ವ್ಯಾಪ್ತಿಗೆ ಸೇರಿದ ಹಳೇ ಸಂತೆ ಮಾಳದಲ್ಲಿ ಅನಧಿಕೃತವಾಗಿ ಶೆಡ್ ನಿರ್ಮಾಣ ಮಾಡಿರುವುದು ಗ್ರಾಪಂ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ದೂರಿನ ಮೇರೆಗೆ ಹಲವು ಬಾರಿ ಶೆಡ್ ನಿರ್ಮಾಣ ಮಾಡಿದವರಿಗೆ ತೆರವು ಗೊಳಿಸಲು ಸೂಚಿಸಲಾಗಿತ್ತು.

ಆದರೂ ತೆರವುಗೊಳಿಸಿರಲಿಲ್ಲ ಇದರಿಂದ ಬೇಸರ ವ್ಯಕ್ತಪಡಿಸಿದ ಆಡಳಿತ ಮಂಡಳಿ ಸಕ್ಷಮದ ಪ್ರಾಧಿಕಾರಕ ನ್ಯಾಯಾಲಯಕ್ಕೆ ಸರ್ಕಾರದ ಆಸ್ತಿ ಉಳಿಸಬೇಕು ಎಂದು ದಾವೆ ಹೂಡಲಾಯಿತು. ನ್ಯಾಯಾಲಯ ಸತ್ಯಾಸತ್ಯತೆ ಪರಿಶೀಲಿಸಿ ತೆರವು ಗೊಳಿಸಲು ಆದೇಶ ಹೊರಡಿಸಿತು. ಅದರ ಅನ್ವಯ ಇಂದು ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.

ಪಿಡಿಒ ಹಾಗೂ ಆಡಳಿತ ಮಂಡಳಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಗ್ರಾಪಂ ಉಪಾಧ್ಯಕ್ಷೆ ಶಶಿಕಲಾ, ಶಿವರಾಜ್, ಸದಸ್ಯರಾದ ಶಕೀಲ್ ಅಹಮದ್, ಲೆಕ್ಕ ಸಹಾಯಕ ರವಿಸ್ವಾಮಿ, ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular