Wednesday, May 21, 2025
Google search engine

Homeಸ್ಥಳೀಯಕೆ.ಆರ್.ನಗರ: ಹೃದಯಾಘಾತದಿಂದ ಯೋಧ ಸಾವು

ಕೆ.ಆರ್.ನಗರ: ಹೃದಯಾಘಾತದಿಂದ ಯೋಧ ಸಾವು

ಕೆ.ಆರ್.ನಗರ: ತಾಲೂಕಿನ ಹೊಸಅಗ್ರಹಾರ ಗ್ರಾಮದ ರಾಮಶೆಟ್ಟಿ ಎಂಬುವವರ ಪುತ್ರ ವೀರಯೋಧ ಸುರೇಶ್(೪೦) ಹೃದಯಾಘಾತದಿಂದ ಸೋಮವಾರ ನಿಧನರಾದರು.

ಮೃತರು ಕಳೆದ ೧೯ ವರ್ಷಗಳಿಂದ ಭಾರತೀಯ ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಜಮ್ಮು-ಕಾಶ್ಮೀರದ ಉರಿ ಸೆಕ್ಟರ್‌ ನಲ್ಲಿ ನಾಯಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತಿದ್ದರು.

ಆ.೨ರಂದು ರಜೆಯ ಮೇಲೆ ಸ್ವ-ಗ್ರಾಮಕ್ಕೆ ಬಂದಿದ್ದು, ಇಂದು ತಮ್ಮ ಐದು ವರ್ಷದ ಪುತ್ರಿ ಪೃಕೃತಿಯ ಹುಟ್ಟು ಹಬ್ಬದ ನಿಮಿತ್ತ ಅನಾಥಾಶ್ರಮಕ್ಕೆ ಊಟವನ್ನು ಕೊಡಲು ಬೆಳಿಗ್ಗೆ ೧೧-೦೦ ಗಂಟೆಯ ಸಮಯದಲ್ಲಿ ಮನೆಯಿಂದ ಹೊರಟು ನಿಂತಿದ್ದಾಗ ಎದೆ ನೋವು ಬಂದು ಅಸ್ವಸ್ಥಗೊಂಡಿದ್ದಾರೆ.

ಅವರನ್ನು ಕೆ.ಆರ್.ನಗರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ಮೃತ ಸೈನಿಕನ ಪತ್ನಿ ಎ.ಎಂ.ಸೌಮ್ಯ ಮಧ್ಯಾಹ್ನ ೩-೩೦ರಲ್ಲಿ ಪಟ್ಟಣದ ಆರಕ್ಷಕ ಠಾಣೆಗೆ ದೂರು ನೀಡಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮೃತ ಸೈನಿಕನ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದರು. ಮೃತರು ಮತ್ನಿ ಸೌಮ್ಯ, ಪುತ್ರಿ ಪೃಕೃತಿ ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

RELATED ARTICLES
- Advertisment -
Google search engine

Most Popular