ಕೆ.ಆರ್.ನಗರ: ತಾಲ್ಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದ ನಿವಾಸಿ ಸಣ್ಣಹೊನ್ನೇಗೌಡ(82) ಮನೆಗೆ ದಿನಸಿ ಸಾಮಾನುಗಳನ್ನು ತರುತ್ತೇನೆಂದು ಹೋದವರು ವಾಪಾಸ್ ಮನೆಗೆ ಬರದೇ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ಜಯಮ್ಮ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಹರೆ: 5.2 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಣ್ಣು ಸರಿಯಾಗಿ ಕಾಣಿಸುವುದಿಲ್ಲ. ಕನ್ನಡ ಮಾತನಾಡುತ್ತಾರೆ.
ಈ ವ್ಯಕ್ತಿಯ ಮಾಹಿತಿ ದೊರೆತಲ್ಲಿ ಕೆ.ಆರ್.ನಗರ ಪೊಲೀಸ್ ಠಾಣೆ ದೂ. 08223-26366, 9480805036 ಅಥವಾ ಜಿಲ್ಲಾ ಕಂಟ್ರೋಲ್ ರೂಂ. ದೂ. 0821-2444800 ನ್ನು ಸಂಪರ್ಕಿಸಬಹುದು.