ಮೈಸೂರು: ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ಪ್ರತಿ ನಿತ್ಯ ಬಡಾವಣೆಯ ಸ್ವಚ್ಛತೆ ಸೇವಾ ಕಾರ್ಯ ಮಾಡುವ ಮುತ್ತುರಾಜ್ ಮತ್ತು ಸಂಗಡಿಗರಿಗೆ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಗಣಪತಿ ವಿತರಿಸಿ ಗಣಪತಿ ಹಬ್ಬದ ಶುಭಾಶಯ ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಧರ್ಮ ಪ್ರಸಾರ ಪ್ರಮುಖ್ ಪುನೀತ್ ಮಾತನಾಡಿ ಗಣಪತಿಯೊಂದಿಗೆ ಪೂಜಾ ಸಾಮಾಗ್ರಿಗಳನ್ನು ನೀಡಲಾಗಿದೆ ಲೋಕ ಮಾನ್ಯ ಬಾಲಗಂಗಾಧರ ತಿಲಕರು ಗಣಪತಿಯನ್ನು ಸಾರ್ವಜನಿಕ ಹಬ್ಬವಾಗಿ ಆಚರಿಸಿದರು ಆದರೆ ಪೌರಕಾರ್ಮಿಕರು ಹಬ್ಬದ ಕೆಲಸದ ಒತ್ತಡದಲ್ಲಿ ಪೂಜೆಗಳನ್ನು ಮಾಡುವುದಕ್ಕೆ ಸಮಯವಿಲ್ಲ ಅನ್ನುತ್ತಾರೆ ಅವರು ಸಹ ಎಲ್ಲರಂತೆಯೇ ಮನೆಯಲ್ಲಿ ಗಣಪತಿ ಪೂಜೆ ಮಾಡಿ ಕೆಲಸಕ್ಕೆ ಹಾಜರಾಗುವಂತೆ ಆಗಲಿ ಎಂದು ಗಣಪತಿ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಎ ನ್ ರಾಮಕೃಷ್ಣ ಪೂಜಾ ಕಾಣಿಕೆಗಳನ್ನು ನೀಡಿದರು, ರಾ. ಸ್ವ. ಸಂಘದ ಪ್ರಮುಖರಾದ ಕೇಶವ ಕುಲಕರ್ಣಿಯವರು ಹಾಗೂ ಡಾ. ಪೃಥು ಪಿ ಅದ್ವೈತ್ ಎಲ್ಲರಿಗೂ ರಾಕಿ ಕಟ್ಟಿದರು.
ಈ ಕಾರ್ಯಕ್ರಮದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೆ.ಆರ್. ಗಣೇಶ್, ವಿಶ್ವ ಹಿಂದೂ ಪರಿಷತ್ ನ ಪುನೀತ್ ಜಿ, ರಾಮಕೃಷ್ಣ, ಕೇಶವ ಕುಲಕರ್ಣಿ, ಪೃಥು ಪಿ ಅದ್ವೈತ್, ಸರಸ್ವತಿ ಸೇರಿದಂತೆ ಹಲವು ಜನ ಉಪಸ್ಥಿತರಿದ್ದರು.