ಮೈಸೂರು: ಡಿ.2 ರಂದು ಕುವೆಂಪು ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿರುವ ಜಿಲ್ಲಾಮಟ್ಟದ ಎರಡನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕುಮಾರಿ ಪ್ರಕೃತಿ ಅವರನ್ನು ಕುವೆಂಪು ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಸರ್ವಾನುಮತದಿಂದ ಆಯ್ಕೆ ಮಾಡಿರುತ್ತಾರೆ.
ಕಾರ್ಯಕ್ರಮವು ಟ್ಯಾಲೆಂಟ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬೆಳಿಗ್ಗೆ 9:00 ಗಂಟೆಗೆ ಕಲಾತಂಡಗಳ ಮೆರವಣಿಗೆಯಿಂದ ಪ್ರಾರಂಭವಾಗಲಿದ್ದು, ಮೂರು ಗೋಷ್ಟಿಗಳನ್ನು ಒಳಗೊಂಡಿರುತ್ತದೆ.