ಚೆನ್ನೈ: ಕುಂಭದ್ರೋಣ ಮಳೆಗೆ ತಮಿಳುನಾಡು ಮಹಾನಗರ ತತ್ತರ. ಮಿಚಾಂಗ್ ಎನ್ನುವ ಸೈಕ್ಲೋನ್‌ನಿಂದ ಮಳೆ ಸುರಿಯುತ್ತಿದೆ. ಜನಜೀವನ ಚೆನ್ನೈನಲ್ಲಿ ಅಸ್ಯವ್ಯಸ್ತವಾಗಿದೆ. ಮನೆ ಗೋಡೆ ಕುಸಿದು ಇಬ್ಬರು ಜೀವ ಕಳೆದುಕೊಂಡಿದ್ದಾರೆ. ವಿಮಾನ, ರೈಲು ಸೇವೆ ವ್ಯತ್ಯಯಗೊಂಡಿದೆ. ತಮಿಳುನಾಡು ಸರ್ಕಾರ ರಕ್ಷಣಾ ಕಾರ್ಯ ಕೈಗೊಂಡಿದೆ.
ಚೆನ್ನೈನ ವಿಮಾನ ನಿಲ್ದಾಣವು ಮಳೆ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿದೆ. ಈ ಕಾರಣದಿಂದ ಚೆನ್ನೈನಿಂದ ಹೋಗಬೇಕಿದ್ದ ಹಲವಾರು ವಿಮಾನಗಳ ಸೇವೆ ವ್ಯತ್ಯಯಗೊಂಡಿದೆ. ಭಾರೀ ಮಳೆಗೆ ಚೆನ್ನೈನ ಪ್ರಮುಖ ಪ್ರದೇಶವಾದ ಮರೀನಾ ಬೀಚ್ ಮುಳುಗಿದೆ. ಎಲ್ಲೆಡೆ ನೀರು ತುಂಬಿ ವಾಹನ ನಿಲುಗಡೆಯೂ ಆಗದ ಸ್ಥಿತಿ ನಿರ್ಮಾಣವಾಗಿದೆ.