Monday, January 5, 2026
Google search engine

Homeಸ್ಥಳೀಯಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಕಲಿಕೆ ಹೊಸ ಆಶಾಕಿರಣ

ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಕಲಿಕೆ ಹೊಸ ಆಶಾಕಿರಣ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಅರ್.ನಗರ : ಸಮಾಜದಿಂದಲೇ ಸರಿ ತಪ್ಪುಗಳನ್ನು ಕಲಿತು ಬೆಳೆಯುವ ನಾವು ಸಮಾಜಕ್ಕಾಗಿ ದುಡಿಯ ಬೇಕಿರುವುದು ಅನಿವಾರ್ಯವಲ್ಲ ಅದು ಕರ್ತವ್ಯವಾಗಿದೆ ಎಂದು ಪ್ರಾಧ್ಯಾಪಕ ಸಿ ಡಿ ಪರಶುರಾಮ್ ಹೇಳಿದರು.

ಸಾಲಿಗ್ರಾಮ ತಾಲೂಕಿನ ಚಿಕ್ಕ ಕೊಪ್ಪಲು ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಇಂಗ್ಲಿಷ್ ಕೋಚಿಂಗ್ ಸೆಂಟರ್ ಮತ್ತು ಸಿ ಎಚ್ ದೇವೇಗೌಡ ಸ್ಮಾರಕ ಉಚಿತ ವಾಚನಾಲಯ ಕೇಂದ್ರದ ಆಡಳಿತ ಮಂಡಳಿ ವತಿಯಿಂದ ನಡೆದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂಗ್ಲಿಷ್ ಎನ್ನುವುದು ಕೇವಲ ಒಂದು ಭಾಷೆ ಮಾತ್ರ ಅದನ್ನು ಕಲಿಯಲು ಗ್ರಾಮಾಂತರ ಪ್ರದೇಶದಲ್ಲಿ ಸೂಕ್ತ ವಾತಾವರಣ ಇಲ್ಲದ ಕಾರಣ ಮಕ್ಕಳಿಗೆ ಕಷ್ಟಕರವಾಗುತ್ತಿದ್ದು ನಮ್ಮ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಉಚಿತವಾಗಿ ಕೋಚಿಂಗ್ ಸೆಂಟರ್ ಅನ್ನು ಮಾಡಿದ್ದು ನನ್ನ ಬಹುದಿನದ ಕನಸು ಆಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುದೇರು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಾತನಾಡಿ ಸರ್ಕಾರಿ ಹುದ್ದೆಗಳನ್ನು ಪಡೆದ ಪರಶುರಾಮ್ ರವರು ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗದೆ ತಮ್ಮ ಗ್ರಾಮದಲ್ಲಿ ಇರುವ ಮಕ್ಕಳಿಗಾಗಿ ಬಹಳ ಹಿಂದೆಯೇ ಗ್ರಂಥಾಲಯವನ್ನು ತೆರೆದಿದ್ದು ಇದೀಗ ಉಚಿತ ಇಂಗ್ಲಿಷ್ ಕೋಚಿಂಗ್ ಸೆಂಟರ್ ಆರಂಭಿಸಿರುವುದು ಸಂತಸದ ಸಂಗತಿಯಾಗಿದ್ದು ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಆನಂದ್ ಹೊಸೂರ್ ಅವರು ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಡೈರಿ ಅಧ್ಯಕ್ಷ ಕುಮಾರಸ್ವಾಮಿ ನಿವೃತ್ತ ಶಿಕ್ಷಕರಾದ ಕಾಳೇಗೌಡ ಜಯರಾಮು, ಸಹಕಾರ ಸಂಘದ ಮಾಜಿ ಅಧ್ಯಕ್ಷ ಪಾರ್ಥ, ಪತ್ರಕರ್ತ ಮುಕುಂದ, ಕೋಚಿಂಗ್ ಸೆಂಟರ್ನ ಶಿಕ್ಷಕಿ ಶೀಲಾ ಮಣಿ, ರವೀಂದ್ರ, ಸಂಶೋಧನಾ ವಿದ್ಯಾರ್ಥಿ ಆನಂದ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular