Monday, March 16, 2026
Google search engine

Homeಸ್ಥಳೀಯಮಹಿಳಾ ದೌರ್ಜನ್ಯ ತಡೆಗೆ ಕಾನೂನು ಅರಿವು ಅಗತ್ಯ : ನ್ಯಾ. ಎಸ್.ಚಂದನ್

ಮಹಿಳಾ ದೌರ್ಜನ್ಯ ತಡೆಗೆ ಕಾನೂನು ಅರಿವು ಅಗತ್ಯ : ನ್ಯಾ. ಎಸ್.ಚಂದನ್

ಕೆ.ಆರ್.ನಗರ : ಮಹಿಳೆಯರು ಕಾನೂನಿನ ಅರಿವನ್ನು ಹೊಂದುವ ಮೂಲಕ ಸಮಾಜದಲ್ಲಿ ತಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ಧೈರ್ಯವಾಗಿ ಎದುರಿಸಬೇಕು ಎಂದು ಪಟ್ಟಣ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಚಂದನ್ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕೆ.ಆರ್.ನಗರ ಮತ್ತು ಸಾಲಿಗ್ರಾಮ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಿನದಿಂದ ದಿನಕ್ಕೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು ಅವುಗಳನ್ನು ಹತ್ತಿಕ್ಕಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾನತೆಯ ಬದುಕು ಸಾಧಿಸಲು ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅತ್ಯಂತ ಅಗತ್ಯವಾಗಿದೆ ಎಂದರು.
ಕಾನೂನಿನ ಅರಿವಿಲ್ಲದ ಕೆಲವರು ದೌರ್ಜನ್ಯ ಸೇರಿದಂತೆ ಸಮಾಜ ವಿರೋಧಿ ಚಟುವಕೆಯಲ್ಲಿ ತೊಡಗಿದ್ದು ಅಂತಹವರನ್ನು ಸರಿ ದಾರಿಗೆ ತರಲು ಪ್ರಜ್ಞಾ ವಂತರು ಮತ್ತು ಬುದ್ದಿವಂತರು ಮುಖ್ಯವಾಹಿನಿಗೆ ತಂದು ಕಾನೂನಿನಲ್ಲಿ ಇರುವ ರಕ್ಷಣೆ ಮತ್ತು ಅನುಕೂಲಗಳ ಬಗೆ ತಿಳಿಸಬೇಕು ಎಂದು ಸಲಹೆ ನೀಡಿದರು.

ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಅಸ್ರೀನಾ ಮಾತನಾಡಿ ಸ್ವಾತಂತ್ರ‍್ಯ ಬಂದು 75ವರ್ಷಗಳು ಕಳೆದಿದ್ದರೂ ಮಹಾತ್ಮ ಗಾಂಧೀಜಿ ಅವರು ಕಂಡ ರಾಮರಾಜ್ಯದ ಕನಸ್ಸು ನನಸಾಗಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ದಿನದಿಂದ ದಿನಕ್ಕೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಅದರಲ್ಲು ಮೈಸೂರು ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ದುಪ್ಪಟ್ಟಾಗುತ್ತಿದ್ದು ಇದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿ ಎಲ್ಲರೂ ಸೇರಿ ಬಾಲ್ಯ ವಿವಾಹ ಮುಕ್ತ ಸಮಾಜ ನಿರ್ಮಾಣ ಮಾಡೋಣ ಎಂದು ಕರೆ ನೀಡಿದರು.

ಸಿಡಿಪಿಒ ಸಿ.ಎಂ.ಅಣ್ಣಯ್ಯ, ವಕೀಲೆ ಪ್ರಭಾವತಿ ಮಾತನಾಡಿದರು. ಎಸಿಡಿಪಿಒಗಳಾದ ಶೋಭಾ, ಅಕ್ಕಮಹಾದೇವಿ, ಸಿಬ್ಬಂದಿಗಳಾದ ಗಾಯತ್ರಿ, ರತ್ನಮ್ಮ ಲತಾ, ಜಯಮಾಲ, ಮಂಜುಳ, ಮೋಹನ್‌ಕುಮಾರಿ, ಹರೀಶ್, ಮಂಜುನಾಥ್, ಆಶಾ, ಸುಧಾ, ವಸುಧ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular