Tuesday, November 4, 2025
Google search engine

Homeರಾಜ್ಯಸುದ್ದಿಜಾಲವಿದ್ಯಾರ್ಥಿ ದೆಸೆಯಲ್ಲಿ ಕಠಿಣ ಶ್ರಮ ಹಾಕಿ ಅಭ್ಯಾಸ ಮಾಡಿದರೆ ಜೀವನ ಸುಖಮಯ: ಕೆ.ಎಲ್.ಸೂರಜ್

ವಿದ್ಯಾರ್ಥಿ ದೆಸೆಯಲ್ಲಿ ಕಠಿಣ ಶ್ರಮ ಹಾಕಿ ಅಭ್ಯಾಸ ಮಾಡಿದರೆ ಜೀವನ ಸುಖಮಯ: ಕೆ.ಎಲ್.ಸೂರಜ್

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಪ್ರತಿಯೊಬ್ಬರು ವಿದ್ಯಾರ್ಥಿ ದೆಸೆಯಲ್ಲಿ ಶ್ರದ್ಧೆಯಿಂದ ನಿರಂತರವಾಗಿ ಕಠಿಣ ಶ್ರಮ ಹಾಕಿ ಅಭ್ಯಾಸ ಮಾಡಿದರೆ ನಂತರದ ಜೀವನ ಸುಖಮಯವಾಗಲಿದೆ ಎಂದು ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಕೆ.ಆರ್.ನಗರ ನಿವಾಸಿ ಕೆ.ಎಲ್.ಸೂರಜ್ ಹೇಳಿದರು.

ಪಟ್ಟಣದ ಆಲ್ಫಾ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿದ್ಯಾರ್ಥಿ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು ಎಲ್ಲಾ ವಿದ್ಯಾರ್ಥಿಗಳಿಗೂ ೧೮ ರಿಂದ ೨೬ನೇ ವಯಸ್ಸಿನಲ್ಲಿ ಕಲಿಯುವ ವಿದ್ಯೆ ಬಹಳ ಮುಖ್ಯವಾಗಿದ್ದು ಅದನ್ನು ಕಳೆದು ಕೊಂಡರೆ ಮತ್ತೆ ಸಾಧನೆ ಮಾಡಲು ಹೆಚ್ಚಿನ ಕಾಲ ವಿಳಂಭವಾಗಲಿದೆ. ಆದ್ದರಿಂದ ಸೀಮಿತ ಅವಧಿಯಲ್ಲಿ ಹೆಚ್ಚಿನ ಪರಿಶ್ರಮ ಪಟ್ಟರೆ ಉನ್ನತ ಹುದ್ದೆ ಪಡೆಯಲು ಸುಲಭ ಸಾಧ್ಯ ಎಂದು ತಿಳಿಸಿದರು.

ಅಮೇರಿಕಾ ಹಾಗು ಇತರೆ ಮುಂದುವರೆದ ದೇಶಗಳಿಗಿಂತ ಭಾರತದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳಿವೆ. ಹೀಗಾಗಿ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳ ಸೆಳೆತಕ್ಕೆ ಒಳಗಾಗದೆ, ಸುವರ್ಣದಂತ ವಿದ್ಯಾರ್ಥಿ ಜೀವನವನ್ನು ವ್ಯಯಮಾಡದೆ ಜ್ಞಾನ ಸಂಪಾದನೆಯಲ್ಲಿ ತೊಡಗಬೇಕು ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿ ದೆಸೆಯಲ್ಲಿ ಹೆಚ್ಚಿನ ಅನುಭವಗಳಿಸಿದರೆ ದುಡಿಮೆಯ ದಾರಿ ಕಂಡುಕೊಳ್ಳಲು ಸಾಧ್ಯವಾಗಲಿದೆ. ತಂದೆ, ತಾಯಿ, ಗುರು ಹಿರಿಯರಿಗೆ ಗೌರವ ಕೊಡಿ. ಅವರ ಸಲಹೆ ಪರಿಗಣಿಸಿ. ಆಸಕ್ತಿ ಮತ್ತು ಇಚ್ಛೆಯ ಹಾದಿಯಲ್ಲಿ ಸಾಗಿ ಸಾಧನೆ ಮಾಡಿ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ವೈ.ಎಸ್.ಸುಬ್ರಹ್ಮಣ್ಯ ಪ್ರಸ್ತುತ ಸನ್ನಿವೇಶದಲ್ಲಿ ಅವಕಾಶಗಳು ಮುಂದಿನ ಸಾಧ್ಯತೆಗಳು ಮತ್ತು ಬದಲಾಗುತ್ತಿರುವ ಪೈಪೋಟಿಯ ಮಾದರಿಗಳು ಬಗ್ಗೆ ತಿಳಿಸಿಕೊಡಲು ಈಗ ತಾನೇ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಐಪಿಎಸ್ ಆಗಿ ಆಯ್ಕೆ ಆಗಿರುವ ಉತ್ತಮ ವ್ಯಕ್ತಿತ್ವದ ಕೆ.ಎಲ್.ಸೂರಜ್ ಅವರು ನಮ್ಮ ಸಂಸ್ಥೆಗೆ ಆಗಮಿಸಿ ಉಪಯುಕ್ತ ಮಾಹಿತಿ ನೀಡಿರುವುದು ಬಹಳ ಸಂತೋಷ ಮತ್ತು ವಿದ್ಯಾರ್ಥಿಗಳ ಸುಯೋಗ. ಸೂರಜ್ ಅವರು ನಮ್ಮ ಕೆ.ಆರ್.ನಗರದವರೆ ಆಗಿರುವುದು ಹೆಮ್ಮೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸೂರಜ್ ತಂದೆ ಕೆ.ಬಿ.ಲಿಂಗರಾಜು, ತಾಯಿ ಗೀತಾರಾಜು, ಅಜ್ಜಿ ಪ್ರೇಮಮ್ಮ, ಆಲ್ಪಾ ಕಾಲೇಜಿನ ಅಧ್ಯಕ್ಷ ರವಿಕುಮಾರ್, ಪ್ರಾಂಶುಪಾಲ ನವೀನ್, ಉಪನ್ಯಾಸಕರಾದ ಕೆ.ಎಲ್.ರಮೇಶ್, ಗಣೇಶ್, ಸ್ವರಾಜ್ ಇಂಡಿಯಾ ಪಕ್ಷದ ತಾಲೂಕು ಅಧ್ಯಕ್ಷ ಗರುಡಗಂಭ ಸ್ವಾಮಿ, ರಾಷ್ಟ್ರೀಯ ಅಹಿಂದ ಸಂಘಟನೆ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಗರಡುಗಂಭ ಮಂಜು, ಯುವ ರೈತ ಘಟಕದ ಅಧ್ಯಕ್ಷ ಅರ್ಜುನಹಳ್ಳಿ ರಾಮಪ್ರಸಾದ್, ಮುಖಂಡರಾದ ಪುಟ್ಟು, ಸಮಂತ್, ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಿದ್ದರು.

RELATED ARTICLES
- Advertisment -
Google search engine

Most Popular