Wednesday, January 7, 2026
Google search engine

Homeರಾಜ್ಯವೆನೆಜುವೆಲಾ ದೇಶದ ಮೇಲಿನ ಅಮೇರಿಕಾ ದಾಳಿ ಖಂಡಿಸಿ ಮಂಗಳೂರಲ್ಲಿ ಸಮಾನ ಮನಸ್ಕರಿಂದ ಪ್ರತಿಭಟನೆ

ವೆನೆಜುವೆಲಾ ದೇಶದ ಮೇಲಿನ ಅಮೇರಿಕಾ ದಾಳಿ ಖಂಡಿಸಿ ಮಂಗಳೂರಲ್ಲಿ ಸಮಾನ ಮನಸ್ಕರಿಂದ ಪ್ರತಿಭಟನೆ

ಸಾರ್ವಭೌಮ ರಾಷ್ಟ್ರ ವೆನಿಜುವೆಲಾ ದೇಶದ ಮೇಲೆ ಅಮೇರಿಕ ದಾಳಿ ನಡೆಸಿ ವೆನೆಜುವೆಲಾ ಅಧ್ಯಕ್ಷ ನಿಕೋಲಾಸ್ ಮಡೊರೊ ಮತ್ತು ಅವರ ಪತ್ನಿಯನ್ನು ಅಪಹರಿಸಿ ದಕ್ಷಿಣ ಅಮೇರಿಕಾದ ಪುಟ್ಟ ದೇಶವಾದ ವೆನೆಜುವೆಲಾ ಮೇಲೆ ಅಘೋಷಿತ ಯುದ್ಧ ಸಾರಿದ ಅಮೇರಿಕ ನೀತಿಯನ್ನು ಖಂಡಿಸಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಸಿಪಿಐಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡುತ್ತಾ ಅಮೇರಿಕಾ ಜಗತ್ತಿನ ತೈಲ ಮಾರುಕಟ್ಟೆಯ ಮೇಲೆ ಅಧಿಪತ್ಯ ಸಾರುವುದಕ್ಕಾಗಿ ದಕ್ಷಿಣ ಅಮೇರಿಕಾದ ಪುಟ್ಟ ರಾಷ್ಟ್ರ ವೆನೆಜುವೆಲಾ ಮೇಲೆ ಧಾಳಿ ಮಾನವ ಹತ್ಯೆ ಮಾಡಿದೆ, ವೆನೆಜುವೆಲಾ ಸೇನಾ ನೆಲೆಗಳನ್ನು ವಶಪಡಿಸಿ ಅಲ್ಲಿನ ಅಧ್ಯಕ್ಷರಾದ ನಿಕೋಲಸ್ ಮಡೊರೊ ಮತ್ತು ಅವರ ಪತ್ನಿಯನ್ನು ಅಪಹರಿಸಿರುವ ಕೃತ್ಯ ಅತ್ಯಂತ ಅಮಾನವೀಯವಾದುದು ಮತ್ತು ಜಾಗತಿಕ ಶಾಂತಿಗೆ ಅಮೇರಿಕ ಹಿಂಸೆಯ ಮೂಲಕ ತಡೆ ಒಡ್ದುತ್ತಿದೆ ಎಂದು ಅವರು ಹೇಳಿದರು.

ಕಾರ್ಮಿಕ ಮುಖಂಡ ಸುಕುಮಾರ್ ತೊಕ್ಕೊಟ್ಟು ಮಾತನಾಡುತ್ತಾ ಅಮೇರಿಕ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಲು ಜಗತ್ತಿನ ಅನೇಕ ದೇಶಗಳನ್ನು ಪರಸ್ಪರ ಯುದ್ಧ, ಸಂಘರ್ಷ ಸೃಷ್ಟಿಸಿದೆ, ಇರಾಕ್, ಅಪಘಾನಿಸ್ಥಾನ, ವಿಯೆಟ್ನಾಂ, ಚಿಲಿ, ಮೆಕ್ಸಿಕೋ, ಕ್ಯೂಬ ದೇಶದ ಮೇಲೆ ಸುಳ್ಳು ಅಪವಾದ ಹೊರಿಸಿ ಆ ದೇಶಗಳ ಸಂಪತ್ತನು ದೋಚಿದೆ. ಅಮೇರಿಕ ವೆನೆಜುವೆಲಾ ದೇಶದ ಮೇಲೆ ನಡೆಸಿರುವ ಧಾಳಿಯನ್ನು ಭಾರತ ವಿರೋಧಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಮುದಾಯದ ವಾಸುದೇವ ಉಚ್ಚಿಲ ಹಾಗೂ ದಲಿತ ನಾಯಕ ಎಂ ದೇವದಾಸ್ ರವರು ಮಾತನಾಡಿದರು.
ವಿವಿಧ ಸಂಘಟನೆಗಳ ಮುಖಂಡರಾದ ಯಾದವ ಶೆಟ್ಟಿ, ಬಾಲಕೃಷ್ಣ ಶೆಟ್ಟಿ,ಡಾ ಕೃಷ್ಣಪ್ಪ ಕೊಂಚಾಡಿ, ಬಿ.ಕೆ ಇಮ್ತಿಯಾಜ್, ಜಯಂತಿ ಶೆಟ್ಟಿ, ಪ್ರಮೀಳಾ, ಭಾರತಿ ಬೋಳಾರ, ಪ್ರಮೋದೀನಿ, ಯೋಗೀತಾ ಸುವರ್ಣ ವಿಲಾಸಿನಿ, ಸುಹಾಸಿನಿ,ಸುನಿಲ್ ಕುತ್ತಾರ್, ಜಗದೀಶ್ ಬಜಾಲ್, ಪಿ ಜಿ ರಫೀಕ್, ಬಿಲ್ಲಾಳ್ ಬೆಂಗ್ರೆ, ಕೃಷ್ಣ ತಣ್ಣೀರುಬಾವಿ, ನಾಗೇಶ್, ರಾಕೇಶ್ ಕುಂದರ್, ವಿಶ್ವನಾಥ ಮಂಜನಾಡಿ, ರಫೀಕ್ ಹರೇಕಳ, ಕೆ ಎಚ್ ಇಕ್ಬಾಲ್,ನಾಗೇಶ್ ಕೋಟ್ಯಾನ್, ತಿಮ್ಮಪ್ಪ ಕೊಂಚಾಡಿ, ಶ್ರೀನಾಥ್ ಕುಲಾಲ್, ರೋಹಿದಾಸ್ ಭಟ್ನಗರ, ಮುಜಾಫರ್ ಅಹ್ಮದ್, ಎಂ ಎನ್ ಶಿವಪ್ಪ, ಮೈಖೆಲ್ ಡಿಸೋಜಾ, ರಮೇಶ್ ಉಳ್ಳಾಲ್, ರಮೇಶ್ ಸುವರ್ಣ ಮೂಲ್ಕಿ ಮುಂತಾದವರು ಹಾಜರಿದ್ದರು.

  • ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular