ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕೆ.ಆರ್.ನಗರ ಪಟ್ಟಣದ ಬ್ರೈಟ್ (BRIGHT) ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಿ.ಆರ್.ಲಿಖಿತ್‌ಗೌಡ ೬೦೦ಕ್ಕೆ ೫೮೪ ಅಂಕಗಳನ್ನು ಪಡೆದು ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾನೆ.
ಈತ ತಾಲೂಕಿನ ಚೀರ‍್ನಹಳ್ಳಿ ಗ್ರಾಮದ ಸಿ.ಎಂ.ರವಿ ಮತ್ತು ಸಿ.ಎಸ್.ಭಾರತಿ ದಂಪತಿಗಳ ಪುತ್ರನಾಗಿದ್ದು, ಈತ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವೃಂದ ಹಾಗೂ ಪೋಷಕರಿಗೆ ಕೀರ್ತಿ ತಂದು ಕೊಟ್ಟಿದ್ದಾನೆ. ಈತನ ಸಾಧನೆಯನ್ನು ಗ್ರಾಮಸ್ಥರು ಕೊಂಡಾಡಿದ್ದಾರೆ.
ಕನ್ನಡ ೯೯, ಇಂಗ್ಲೀಷ್ ೯೧, ಅರ್ಥಶಾಸ್ತç ೯೭, ವ್ಯವಹಾರ ಅಧ್ಯಯನ ೯೯, ಲೆಕ್ಕಶಾಸ್ತç ೯೯ ಮತ್ತು ಗಣಕ ವಿಜ್ಞಾನದಲ್ಲಿ ೯೯ ಅಂಕಗಳನ್ನು ಪಡೆದುಕೊಂಡಿದ್ದಾನೆ. ಈತನ ತಂದೆ ಸಿ.ಎಂ.ರವಿ ಹೊಸ ಅಗ್ರಹಾರ ಗ್ರಾಮದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ನಿಲಯಪಾಲಕನಾಗಿದ್ದು, ಪ್ರಸ್ತುತ ತಾಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಸಕರ ಅಭಿನಂದನೆ-ಈತನ ಸಾಧನೆಯನ್ನು ಶಾಸಕ ಡಿ.ರವಿಶಂಕರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಅರುಣ್‌ಕುಮಾರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚರ‍್ನಹಳ್ಳಿಶಿವಣ್ಣ, ತಾಲೂಕು ಕಾಂಗ್ರೆಸ್ ಮುಖಂಡ ಚೀರ‍್ನಹಳ್ಳಿಶಿವರಾಜು, ಕಾಲೇಜಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.