Thursday, November 6, 2025
Google search engine

HomeUncategorizedರಾಷ್ಟ್ರೀಯಸಾಲ ವಂಚನೆ ಪ್ರಕರಣ: ಅನಿಲ್ಅಂಬಾನಿಗೆ ಮತ್ತೆ ಈಡಿ ಸಮನ್ಸ್

ಸಾಲ ವಂಚನೆ ಪ್ರಕರಣ: ಅನಿಲ್ಅಂಬಾನಿಗೆ ಮತ್ತೆ ಈಡಿ ಸಮನ್ಸ್

ಹೊಸದಿಲ್ಲಿ: ಸಾಲ ವಂಚನೆ ಪ್ರಕರಣ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರಿಗೆ ಜಾರಿ ನಿರ್ದೇಶನಾಲಯ ಮತ್ತೊಮ್ಮೆ ಸಮನ್ಸ್ ಜಾರಿಗೊಳಿಸಿದೆ. ನವೆಂಬರ್ 14ರಂದು ತನ್ನೆದುರು ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಅವರಿಗೆ ಸೂಚಿಸಿದೆ ಎಂದು indiatoday.in ವರದಿ ಮಾಡಿದೆ.

ಈ ಪ್ರಕರಣದಲ್ಲಿ ಅನಿಲ್ ಅಂಬಾನಿ ಎರಡನೆಯ ಬಾರಿ ವಿಚಾರಣೆ ಎದುರಿಸಲಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಭಾರತೀಯ ಬ್ಯಾಂಕ್ ಗಳಿಂದ ತಮ್ಮ ಸಮೂಹ ಸಂಸ್ಥೆ ಸಾಲ ಪಡೆದು, ಹಣಕಾಸು ಅವ್ಯವಹಾರಗಳನ್ನು ನಡೆಸಿದೆ ಎಂಬ ಆರೋಪದ ಕುರಿತು ಆಗಸ್ಟ್ 2025ರಲ್ಲಿ ಅನಿಲ್ ಅಂಬಾನಿಗೆ ಸಮನ್ಸ್ ಜಾರಿಗೊಳಿಸಿದ್ದ ಜಾರಿ ನಿರ್ದೇಶನಾಲಯ, ಅವರನ್ನು ವಿಚಾರಣೆಗೂ ಒಳಪಡಿಸಿತ್ತು.

2010ರಿಂದ 2012ರ ನಡುವೆ ರಿಲಯನ್ಸ್ ಕಮ್ಯುನಿಕೇಷನ್ಸ್ ಹಾಗೂ ಅದಕ್ಕೆ ಸಂಬಂಧಿಸಿದ ಅಂಗಸಂಸ್ಥೆಗಳು ಪಡೆದಿರುವ ಸಾಲಗಳ ಕುರಿತು ಜಾರಿ ನಿರ್ದೇಶನಾಲಯ ತನ್ನ ತನಿಖೆಯನ್ನು ಕೇಂದ್ರೀಕರಿಸಿದೆ. ರಿಲಯನ್ಸ್ ಗ್ರೂಪ್ ಸಾಲದ ನಿಯಮಗಳನ್ನು ಮೀರಿ ದೊಡ್ಡ ಪ್ರಮಾಣದ ಮೊತ್ತವನ್ನು ಇತರ ಸಂಸ್ಥೆಗಳಿಗೆ ವರ್ಗಾಯಿಸಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

RELATED ARTICLES
- Advertisment -
Google search engine

Most Popular