Wednesday, March 25, 2026
Google search engine

Homeಸ್ಥಳೀಯಲೋಕಸಭೆ ಕ್ಷೇತ್ರ ಪುನರ್ವಿಂಗಡಣೆ : 2029ರೊಳಗೆ ಲೋಕಸಭಾ ಸ್ಥಾನಗಳು 816ಕ್ಕೆ ಹೆಚ್ಚಳ

ಲೋಕಸಭೆ ಕ್ಷೇತ್ರ ಪುನರ್ವಿಂಗಡಣೆ : 2029ರೊಳಗೆ ಲೋಕಸಭಾ ಸ್ಥಾನಗಳು 816ಕ್ಕೆ ಹೆಚ್ಚಳ

ಬೆಂಗಳೂರು : ಕೇಂದ್ರ ಸರ್ಕಾರವು ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆಗೆ ತಯಾರಿ ನಡೆಸಿದೆ. ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳನ್ನ ಬರೋಬ್ಬರಿ 816 ಕ್ಕೆ ಹೆಚ್ಚಿಸಲು ಮುಂದಾಗಿದೆ. ಇದರಿಂದ ಕರ್ನಾಟಕದಲ್ಲಿ ಪ್ರಸ್ತುತ 28 ಇರುವ ಲೋಕಸಭಾ ಕ್ಷೇತ್ರಗಳು 42 ಕ್ಕೆ ಹೆಚ್ಚುವ ಸಾಧ್ಯತೆಗಳಿವೆ.

2029ರ ಲೋಕಸಭಾ ಚುನಾವಣೆಗೆ 3 ವರ್ಷಗಳು ಬಾಕಿಯಿರುವ ಹೊತ್ತಲ್ಲೇ ಕೇಂದ್ರ ಸರ್ಕಾರ ಈ ಐತಿಹಾಸಿಕ ನಿರ್ಧಾರಕ್ಕೆ ಕೈಹಾಕಿದೆ. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಕಾಯ್ದೆ ಈಗಾಗಲೇ ಸಂಸತ್ತಿನ ಉಭಯ ಸದನಗಳಲ್ಲಿ ಪಾಸ್ ಆಗಿದೆ. ಆದರೆ, ಇದು ಜಾರಿಯಾಗಿಲ್ಲ. ಈ ಕಾನೂನು ಜಾರಿಯಾಗುವ ಕಾಲ ಕೂಡ ಹತ್ತಿರವಿದೆ. ಈ ಬೆನ್ನಲ್ಲೇ ಕ್ಷೇತ್ರ ಪುನರ್ವಿಂಗಡಣೆಗೂ ತಯಾರಿ ನಡೆಸಿದೆ ಕೇಂದ್ರ ಸರ್ಕಾರ.

2011ರ ಜನಗಣತಿ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ 816 ಕ್ಕೆ ಹೆಚ್ಚಳವಾಗುವ ಸಾಧ್ಯತೆಯಿದ್ದು, ಈ ಪೈಕಿ ಸುಮಾರು 273 ಸ್ಥಾನಗಳು ಮಹಿಳಾ ಮೀಸಲು ಕ್ಷೇತ್ರಗಳಾಗಿರಲಿವೆ. ಅಲ್ಲದೇ ಈ ಐತಿಹಾಸಿಕ ನಿರ್ಧಾರದಿಂದ ಪ್ರತಿ ರಾಜ್ಯಗಳು ಹೆಚ್ಚಿನ ಸಂಖ್ಯೆಯ ಸಂಸದರನ್ನ ಹೊಂದಲಿವೆ. ಜೊತೆಗೆ ರಾಜಕೀಯ ಪಕ್ಷಗಳ ಪ್ರಭಾವವೂ ಹೆಚ್ಚಾಗಲಿದೆ.

ರಾಜ್ಯವಾರು ಸ್ಥಾನಗಳು (ಅಂದಾಜು)
– ಹಿಂದಿ ಬೆಲ್ಟ್
* ಉತ್ತರ ಪ್ರದೇಶ: 80 ರಿಂದ 120 ಸ್ಥಾನಗಳು
* ಬಿಹಾರ: 40 ರಿಂದ 60 ಸ್ಥಾನಗಳು
* ಮಧ್ಯಪ್ರದೇಶ: 29 ರಿಂದ 43-44 ಸ್ಥಾನಗಳು
* ರಾಜಸ್ಥಾನ: 25 ರಿಂದ 37-38 ಸ್ಥಾನಗಳು

ಹಿಂದಿ ಭಾಷಿಕರನ್ನ ಹೆಚ್ಚಾಗಿ ಒಳಗೊಂಡಿರುವ ಈ ರಾಜ್ಯಗಳು ಈಗಾಗಲೇ ಲೋಕಸಭಾ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿವೆ. ಕ್ಷೇತ್ರ ಪುನರ್ವಿಂಗಡಣೆಯು ಇವುಗಳ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.

– ಪಶ್ಚಿಮ ಮತ್ತು ಮಧ್ಯ ಭಾರತ ರಾಜ್ಯಗಳು
* ಮಹಾರಾಷ್ಟ್ರ: 48 ರಿಂದ 72 ಸ್ಥಾನಗಳು
* ಗುಜರಾತ್: 26 ರಿಂದ 39 ಸ್ಥಾನಗಳು
* ಛತ್ತೀಸ್‌ಗಢ: 11 ರಿಂದ 16-17 ಸ್ಥಾನಗಳು

ಉತ್ತರ ಪ್ರದೇಶದ ನಂತರ ಮಹಾರಾಷ್ಟ್ರ 2ನೇ ಅತಿದೊಡ್ಡ ರಾಜ್ಯವಾಗಿ ಹೊರಹೊಮ್ಮುವ ಹೊಸ್ತಿಲಲ್ಲಿದೆ

– ಪೂರ್ವ ರಾಜ್ಯಗಳು
* ಪಶ್ಚಿಮ ಬಂಗಾಳ: 42 ರಿಂದ 63 ಸ್ಥಾನಗಳು
* ಒಡಿಶಾ: 21 ರಿಂದ 31-32 ಸ್ಥಾನಗಳು
* ಜಾರ್ಖಂಡ್: 14 ರಿಂದ 21 ಸ್ಥಾನಗಳು

– ದಕ್ಷಿಣ ರಾಜ್ಯಗಳು
* ತಮಿಳುನಾಡು: 39 ರಿಂದ 58-59 ಸ್ಥಾನಗಳು
* ಕರ್ನಾಟಕ: 28 ರಿಂದ 42 ಸ್ಥಾನಗಳು
* ಆಂಧ್ರಪ್ರದೇಶ: 25 ರಿಂದ 37-38 ಸ್ಥಾನಗಳು
* ತೆಲಂಗಾಣ: 17 ರಿಂದ 25-26 ಸ್ಥಾನಗಳು
* ಕೇರಳ: 20 ರಿಂದ 30 ಸ್ಥಾನಗಳು

– ಉತ್ತರ ಮತ್ತು ಸಣ್ಣ ರಾಜ್ಯಗಳು
* ಪಂಜಾಬ್: 13 ರಿಂದ 19-20 ಸ್ಥಾನಗಳಿಗೆ
* ಹರಿಯಾಣ: 10 ರಿಂದ 15 ಸ್ಥಾನಗಳಿಗೆ
* ದೆಹಲಿ: 7 ರಿಂದ 10-11 ಸ್ಥಾನಗಳಿಗೆ
* ಉತ್ತರಾಖಂಡ: 5 ರಿಂದ 7-8 ಸ್ಥಾನಗಳಿಗೆ
* ಹಿಮಾಚಲ ಪ್ರದೇಶ: 4 ರಿಂದ 6 ಸ್ಥಾನಗಳಿಗೆ

– ಈಶಾನ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು
* ಅಸ್ಸಾಂ: 14 ರಿಂದ 21 ಸ್ಥಾನಗಳಿಗೆ
* ಈಶಾನ್ಯ ರಾಜ್ಯಗಳು (ಮಣಿಪುರ, ಮೇಘಾಲಯ, ಇತ್ಯಾದಿ) ತಲಾ ಒಂದು ಅಥವಾ ಎರಡು ಸ್ಥಾನಗಳನ್ನು ಪಡೆಯುತ್ತವೆ. ಅಲ್ಲದೇ ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

RELATED ARTICLES
- Advertisment -
Google search engine

Most Popular